ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿವಾಳ: ಇಂಟರ್ನೆಟ್ ನಲ್ಲಿ ವೇಶ್ಯಾವಾಟಿಕೆ, ಯುವತಿಯ ಸೆರೆ

By Srinath
|
Google Oneindia Kannada News

internet-prostitution-racket-busted-ccb-bangalore
ಬೆಂಗಳೂರು, ನ.24: ಇಂಟರ್ನೆಟ್‌ನಲ್ಲಿ ಜಾಹೀರಾತು ನೀಡಿ ಹೈಟೆಕ್‌ ವೈಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಯುವತಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.

ಇಂಟರ್ನೆಟ್‌ನಲ್ಲಿ 'ಮೈ ಸೆಕ್ಸಿ ಬಾಡಿ ವೇಟಿಂಗ್ ಫಾರ್ ಯು ಬೆಂಗಳೂರು" ಎಂದು ಜಾಹೀರಾತು ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜಾಹೀರಾತಿನಲ್ಲಿ ಮೊಬೈಲ್ ನಂಬರ್ ನೀಡಿ, ಆ ನಂಬರಿಗೆ ಕರೆ ಮಾಡಿದರೆ 5 ರಿಂದ 10 ಸಾವಿರ ರೂ. ಗೆ ಕರೆವೆಣ್ಣುಗಳು ಸಿಗುತ್ತಾರೆ ಎಂದು ಆರೋಪಿಗಳು ವೆಂಕಟೇಶ್ವರ ಲೇ ಔಟ್‌ 13ನೇ ಕ್ರಾಸ್‌ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಯುವತಿ ಆಶಾ ಶೇಖ್(20) ಸೇರಿದಂತೆ ಹಾಸನ ಜಿಲ್ಲೆಯ ಸಿಂಗಾಪುರ ಗ್ರಾಮದ ಎಸ್.ಕೆ. ಶ್ರೀನಿವಾಸ(30), ಹೊಸಕೋಟೆಯ ಎನ್. ಶ್ರೀನಿವಾಸ(36) ಬಂಧಿತ ಆರೋಪಿಗಳು.

ಆರೋಪಿಗಳಿಂದ 17 ಸಾವಿರ ರೂ. ನಗದು, 3 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೇಶ್ಯಾವಾಟಿಕೆ ದಂಧೆ ನಡೆಸಲು ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದ ಆರೋಪಿ ರವಿ ಎಂಬಾತನು ತಲೆ ಮರೆಸಿಕೊಂಡಿದ್ದು, ಅವನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ನಗರದ ಜಂಟಿ ಪೊಲೀಸ್‌ ಆಯುಕ್ತ (ಅಪರಾಧ) ಬಿ.ದಯಾನಂದ, ಡಿಸಿಪಿ ಡಿ.ಎಂ.ಕೃಷ್ಣಂರಾಜು ಮಾರ್ಗದರ್ಶನದಲ್ಲಿ ಎಸಿಪಿ ಎಸ್‌.ವ್ಹಿ.ಗುಳೇದ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಸಿ.ಸಿದ್ದರಾಜು, ಕೆ.ಆರ್‌.ಭದ್ರಮ್ಮ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿದೆ.

English summary
Bangalore Central Crime Branch sleuths claimed to have busted an internet-based prostitution racket being run from a rented house in Madivala and nabbed 3 persons, including two alleged pimps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X