ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಸಂಪಂಗಿಗೆ ಮುಖಭಂಗ, ಜಡ್ಜ್ ಬದಲಾವಣೆಗೆ ನಕಾರ

By Mahesh
|
Google Oneindia Kannada News

KGF MLA Y Sampangi
ಬೆಂಗಳೂರು, ನ.25: ಲೋಕಾಯುಕ್ತ ನ್ಯಾ. ಸುಧೀಂದ್ರರಾವ್ ಅವರ ವಿರುದ್ಧ ಪ್ರಮಾಣಪತ್ರ ನೀಡಿ ಲಂಚ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದ ವೈ ಸಂಪಂಗಿಗೆ ತೀವ್ರ ಮುಖಭಂಗವಾಗಿದೆ. ಲೋಕಾಯುಕ್ತ 'ನ್ಯಾಯಪೀಠ"ವನ್ನು ಬದಲಿಸಬೇಕೆಂಬ ಕೆಜಿಎಫ್ ಶಾಸಕ ವೈ.ಸಂಪಂಗಿ ಮನವಿಯನ್ನು ಹೈಕೋರ್ಟ್ ನ್ಯಾ. ಬಿವಿ ಪಿಂಟೋ ಗುರುವಾರ ತಿರಸ್ಕರಿಸಿದೆ.

ನ್ಯಾ.ಎನ್.ಕೆ.ಸುಧೀಂದ್ರರಾವ್ ರಾಜಕಾರಣಿಗಳ ವಿರುದ್ಧ ನಕಾರಾತ್ಮಕ ಧೋರಣೆ ಹೊಂದಿದ್ದಾರೆ ಎಂಬುದು ಕೇವಲ ಅನುಮಾನವಷ್ಟೆ ಹೊರತು, ಆ ಸಂಬಂಧ ಸೂಕ್ತ ಸಾಕ್ಷಾಧಾರಗಳಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಸದಸ್ಯ ಬಿ.ಎಂ.ರಾಮಚಂದ್ರ ಮತ್ತು ಗುತ್ತಿಗೆದಾರ ಅಮೇಂದ್ರ ವೌನಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ 'ಸಂಪಂಗಿಯ ಜಾಮೀನು ರದ್ದುಗೊಳಿಸುವಂತೆ ನ್ಯಾ.ಸುಧೀಂದ್ರರಾವ್‌ಗೆ ನಾನೇ ಹೇಳಿದ್ದು ಎಂದು ನ್ಯಾಯಾಧೀಶರ ಸಹೋದರ ಕಾಂಗ್ರೆಸ್ ಮುಖಂಡ ಎನ್.ಕೆ.ಬದ್ರೀನಾಥ್ ಬಂಗಾರ ಪೇಟೆಯಲ್ಲಿ ಎಲ್ಲರಿಗೂ ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಈ ಪ್ರಮಾಣ ಪತ್ರವನ್ನು ಸಹ ನ್ಯಾಯಮೂರ್ತಿಗಳು ವಜಾಗೊಳಿಸಿದರು.

ಗಾಯದ ಮೇಲೆ ಬರೆ: ಲೋಕಾಯುಕ್ತ ಕೋರ್ಟ್ ವಿಚಾರಣಾ ಪ್ರಕ್ರಿಯೆಗೆ 15 ದಿನಗಳ ಕಾಲದ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಗುರುವಾರ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಲೋಕಾಯುಕ್ತ ಕೋರ್ಟ್‌ನಲ್ಲಿ ಡಿ.2ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

English summary
High Court Judge BV Pinto has rejected KGF MLA Y Sampangi'sd plea to change Lokayukta special judge NK Sudhindra Rao in bribe case. HC has already ordered stay on Bribe Case Lokayukta probe and court proceeding for 15 days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X