• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾಹೂ ಖರೀದಿಗೆ ಮತ್ತೆ ಗಾಳ ಹಾಕಿದ ಮೈಕ್ರೋಸಾಫ್ಟ್

By Mahesh
|

ಸ್ಯಾನ್ ಫ್ರಾನ್ಸಿಸ್ಕೋ, ನ.24: ಇಂಟರ್ ನೆಟ್ ಲೋಕದ ಪ್ರಮುಖ ಸಂಸ್ಥೆ ಯಾಹೂ ಆರ್ಥಿಕ ಪರಿಸ್ಥಿತಿ ದಿನೇದಿನೇ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಸಾಫ್ಟ್ ವೇರ್ ದಿಗ್ಗಜ ಮೈಕ್ರೋಸಾಫ್ಟ್ ಮತ್ತೊಮ್ಮೆ ಯಾಗೂ ಖರೀದಿಗೆ ಗಾಳ ಹಾಕುತ್ತಿದೆ.

ಖಾಸಗಿ ಈಕ್ವಿಟಿ ಸಂಸ್ಥೆಗಳ ಜೊತೆ ಕೈ ಜೋಡಿಸಿರುವ ಮೈಕ್ರೋಸಾಫ್ಟ್ ಮತ್ತೊಮ್ಮೆ ಯಹೂ ಖರೀದಿಸಿದೆ ಯತ್ನಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

2008ರಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಯಾಹೂ ಖರೀದಿಸುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ಯಾಹೂ ಸುದ್ದಿಯನ್ನು ತಳ್ಳಿಹಾಕಿತ್ತು.

ನಂತರ ಹುಷಾರಾಗಿ ಡೀಲ್ ಕುದುರಿಸಲು ಮಂದಾದ ಮೈಕ್ರೋಸಾಫ್ಟ್ ಹೊಸ ಸರ್ಚ್ ಇಂಜಿನ್ 'ಬಿಂಗ್' ಅನ್ನು ಯಾಹೂ ತಾಣಗಳಲ್ಲಿ ಬಿಟ್ಟು ರುಚಿ ತೋರಿಸಿತು.

ಈ ಮೂಲಕ ಇತರೆ ಕಂಪನಿಗಳ ಕಣ್ಣು ಯಾಹೂ ಮೇಲೆ ಬೀಳದಂತೆ ನೋಡಿಕೊಂಡ ಮೈಕ್ರೋಸಾಫ್ಟ್, ಸುಮಾರು 9 ಕಂಪನಿಗಳ ನಡುವೆ ಪೈಪೋಟಿ ನಡೆಸಿತ್ತು.

ಸುಮಾರು 700 ಮಿಲಿಯನ್ ಗೂ ಅಧಿಕ ವೀಕ್ಷಕರನ್ನು ಹೊಂದಿರುವ ಯಾಹೂ ತನ್ನ ತೆಕ್ಕೆಯಲ್ಲಿ ಯಾಹೂ! ನ್ಯೂಸ್, ಯಾಹೂ ಫೈನಾನ್ಸ್ ಹಾಗೂ ಯಾಹೂ ಸ್ಫೋರ್ಟ್ ತಾಣಗಳು ಸೇರಿದೆ.

ಖರೀದಿಯ ಪರಿಣಾಮ ಏನಾಗಲಿದೆ?: ಒಂದು ವೇಳೆ ಮೈಕ್ರೋಸಾಫ್ಟ್ ಹಾಗೂ ಯಾಹೂ ಡೀಲ್ ಕುದುರಿದರೆ, ಆನ್ ಲೈನ್ ವಾಣಿಜ್ಯ ತಾಣ ಆಲಿಬಾಬಾ ಕೂಡಾ ಮೈಕ್ರೋಸಾಫ್ಟ್ ಕಡೆ ವಾಲುವ ಲಕ್ಷಣಗಳಿವೆ.

ಯಾಹೂ ಡೀಲ್ ಮುರಿಯಲು ಒಪ್ಪಂದದ ಹಣವೇ ಕಾರಣ ಎನ್ನಲಾಗಿದೆ. 33 ಡಾಲರ್ ಪ್ರತಿ ಷೇರಿನಂತೆ ಮಾರಾಟಕ್ಕೆ ಮುಂದಾಗಿದ್ದ ಮೈಕ್ರೋಸಾಫ್ಟ್ ಮನವಿಯನ್ನು ಯಾಹೂ ಸಂಸ್ಥೆ ಅಂದಿನ ಸಹ ಸ್ಥಾಪಕ ಜೆರ್ರಿ ಯಂಗ್ ತಳ್ಳಿಹಾಕಿದ್ದರು. ಆದರೆ, ಈಗ ಯಂಗ್ ಇಲ್ಲ, ಕರೋಲ್ ಇಲ್ಲ. ಮಧ್ಯಂತರ ಸಿಇಒ ಟಿಮ್ ಟೇಮ್ ಮಾಡೋದು ಎಂಎಸ್ ಗೆ ಗೊತ್ತಿದೆ. ಸೋ, ಮೈಕ್ರೋಸಾಫ್ಟ್ ಆಸೆಗೆ ಭಂಗವಿಲ್ಲ.

English summary
With the Internet pioneer, Yahoo's financial books not exactly sound, Microsoft has resumed attempts to lift the ailing firm by bidding for it. According to a report on The New York Times, Microsoft is believed to have joined a small pool of suitors that include private equity firms to renew their bid for Yahoo!.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X