ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಾರ್ಟಿ ಅನಿಮಲ್' ಸೈರಸ್ ಮಿಸ್ತ್ರಿ ಟಾಟಾಗೆ ತಕ್ಕ ಮೇಸ್ತ್ರಿ

By Srinath
|
Google Oneindia Kannada News

party-animal-mistry-right-choice-for-ratan
ಮುಂಬೈ,ನ.24: ಟಾಟಾದ ಹೊಸ ಮೇಸ್ತ್ರಿ ಐರಿಷ್ ಪ್ರಜೆ ಸೈರಸ್ ಮಿಸ್ತ್ರಿ ಅವರು ರತನ್ ಟಾಟಾ ಅವರಂತೆ ಪಾರ್ಸಿ ಜನಾಂಗದವರು. ಗಾಲ್ಫ್ ಇವರ ನೆಚ್ಚಿನ ಆಟ. ಮಿಸ್ತ್ರಿ ಒಂದು ವಿಷಯದಲ್ಲಿ 'ಬಾಂಬೆ ಹೌಸ್' ಸಾಮ್ರಾಟ ರತನ್ ಗೆ ವಿರುದ್ಧವಾದ ಹವ್ಯಾಸ ಹೊಂದಿದ್ದಾರೆ. ಏನಪಾ ಅಂದರೆ ಮಿಸ್ತ್ರಿ ಪಕ್ಕಾ ಪಾರ್ಟಿ ಅನಿಮಲ್. ಆದರೆ ಎಂದಿಗೂ ಅಳತೆ ಮೀರಿಲ್ಲ ಎಂಬುದೇ ರತನ್ ಗೆ ಪ್ರಿಯವಾದ ಸತ್ಯ ಸಂಗತಿ!

ಮುಂಬೈ, ಲಂಡನ್, ಪೂನಾ ಹೀಗೆ ಅನೇಕ ಕಡೆ ಮನೆಗಳನ್ನು ಹೊಂದಿರುವ ಸೈರಸ್ ಮಿಸ್ತ್ರಿ, 82 ವರ್ಷದ ರತನ್ ಗೆ ಮತ್ತೂ ಒಂದು ವಿಷಯದಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಾರೆ. ಏನಪಾ ಅಂದರೆ, ಹೈಸ್ಕೂಲಿನಲ್ಲಿ ಓದುತ್ತಿರುವ ಇಬ್ಬರು ಗಂಡು ಮಕ್ಕಳ ತಂದೆ ಮಿಸ್ತ್ರಿ ಪಕ್ಕಾ ಫ್ಯಾಮಿಲಿ ಮ್ಯಾನ್.

ಅಂದಹಾಗೆ ರತನ್ ಸೋದರ (ಬಹುತೇಕ ಎಲ್ಲರೂ ಈತನೇ ರತನ್ ಉತ್ತರಾಧಿಕಾರಿ ಎಂದು ತಿಳಿದಿದ್ದರು) ಮಿಸ್ತ್ರಿಯ ಕಿರಿಯ ಸೋದರಿ ಆಲೂ ಅವರನ್ನೇ ಮದುವೆಯಾಗಿರುವುದು! ಇದರ ಹೊರತಾಗಿ ಸೈರಸ್ ಮಿಸ್ತ್ರಿಗೂ ರತನ್ ಗೂ ಬಹಳಷ್ಟು ಸಾಮ್ಯವಿದೆ- ಇಬ್ಬರೂ ಮೆಲು ಮಾತುಗಾರರು. ಶ್ರೀಮಂತಿಕೆಯ ಜಂಭವೂ ಇಲ್ಲ.

ಲಂಡನ್‌ನ ಇಂಪಿರಿಯಲ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಸೈರಸ್ ಮಿಸ್ತ್ರಿ, ಲಂಡನ್‌ನ ಬಿಸಿನೆಸ್ ಸ್ಕೂಲ್‌ನ ಆಡಳಿತ ನಿರ್ವಹಣೆ ಸ್ನಾತಕೋತ್ತರ ಪದವೀಧರರೂ ಹೌದು. ಸೈರಸ್ ಮಿಸ್ತ್ರಿ ಅಪ್ಪಾನೂ 7.6 ಶತಕೋಟಿ ಡಾಲರ್ ಮೌಲ್ಯದ ಖ್ಯಾತ ನಿರ್ಮಾಣ ಕಂಪನಿಯ ಒಡೆಯರು. ಆದರೆ ಸೈರಸ್ ಮಿಸ್ತ್ರಿ ಹೆಚ್ಚಾಗಿ ಆ ಸಂಸ್ಥೆಯೊಂದಿಗೆ ಗುರಿತಿಸಿಕೊಂಡಿಲ್ಲ. ಅವರ ನಿಷ್ಠೆ ಏನಿದ್ದರೂ ಟಾಟಾ ಸಮೂಹಕ್ಕೇ. ಸೋ, ಸೈರಸ್ ಮಿಸ್ತ್ರಿ ಸಾರಥ್ಯದಲ್ಲಿ ಟಾಟಾ ಸಮೂಹ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ.

English summary
Cyrus Mistry emerged as the only consensus choice with the backing of current chairman Ratan Tata as Tata Group’s search for a successor. Mistry is known to be a foodie. Like Ratan Tata, Cyrus Pallonji Mistry, 44, is described by close friends as soft-spoken, candid and down to earth. And steers clear of the cocktail party circuit. But unlike lifelong bachelor Tata, Mistry is said to be a devoted family man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X