ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಧರಂ ಸಿಂಗ್‌ಗೆ ಸುತ್ತಿಕೊಂಡ ಅಕ್ರಮ ಗಣಿ ಭೂತ

By Srinath
|
Google Oneindia Kannada News

illegal-mining-high-court-notice-dharam-singh
ಬೆಂಗಳೂರು, ನ. 24: ಅಕ್ರಮ ಗಣಿಗಾರಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಧರಂ ಸಿಂಗ್ ವಿರುದ್ಧ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ. ಹಿಂದಿನ ಲೋಕಾಯುಕ್ತ ನ್ಯಾ ಸಂತೋಷ್ ಹೆಗ್ಡೆ ನೀಡಿರುವ ಅಕ್ರಮ ಗಣಿಗಾರಿಕೆ ವರದಿ ಆಧರಿಸಿ ಧರಂ ಸಿಂಗ್ ವಿರುದ್ಧ ಸೂಕ್ತ ಕ್ರಮ ಸಲ್ಲಿಸುವಂತೆ ಕೋರಿ ವಕೀಲ ಡಿ. ನಟೇಶ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಜೆ. ಸೇನ್ ಮತ್ತು ನ್ಯಾ ಎಎಸ್ ಬೋಪಣ್ಣ ಅವರ ವಿಭಾಗೀಯ ಪೀಠ, ಧರಂ ಸಿಂಗ್ ಸೇರಿದಂತೆ ಲೋಕಾಯುಕ್ತ ಸಂಸ್ಥೆ, ರಾಜ್ಯಪಾಲರ ಕಚೇರಿ, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿತು.

ಪ್ರಕರಣದ ಹಕೀಕತ್ತು ಏನು?: 2004ರಲ್ಲಿ ಅಂದಿನ ಮುಖ್ಯಮಂತ್ರಿ ಧರಂ ಸಿಂಗ್, ಕೇಂದ್ರ ಸರಕಾರದ ಆದೇಶ ಉಲ್ಲಂಘಿಸಿ ಬಳ್ಳಾರಿ ಜಿಲ್ಲೆ ಸೇರಿದಂತೆ ಕೆಲವು ಪ್ರದೇಶದಲ್ಲಿನ ಪಟ್ಟಾ ಜಮೀನಿನಲ್ಲಿ ಪರವಾನಗಿರಹಿತರಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ ಎನ್ನುವುದು ಅರ್ಜಿದಾರರ ಆರೋಪ. ಕೇಂದ್ರದ ಈ ಆದೇಶವನ್ನು ಹೈಕೋರ್ಟ್ ಸಹ ಎತ್ತಿಹಿಡಿದಿತ್ತು.

ಧರಂ ಸಿಂಗ್ ಕಬ್ಬಿಣದ ಅದಿರನ್ನು ನಿಯಮ ಉಲ್ಲಂಘಿಸಿ ಸಾಗಣೆ ಮಾಡಲು ಅನುಮತಿ ನೀಡಿದ್ದರಿಂದ ರಾಜ್ಯ ಸಕಾರದ ಬ್ಕೊಕಸ್ಕಕೆ ಸುಮಾರು 23 ಕೋಟಿ ರೂ. ನಷ್ಟ ಆಗಿದೆ. ಅಲ್ಲದೆ, ಅಕ್ರಮ ಗಣಿಗಾರಿಕೆಯ ಸಂಬಂಧ ನಿವೃತ್ತ ಲೋಕಾಯುಕ್ತ ನ್ಯಾ ಸಂತೋಷ್ ಹೆಗ್ಡೆ, 2008ರಲ್ಲಿ ನೀಡಿದ ಮಧ್ಯಾಂತರ ವರದಿಯಲ್ಲಿ ಈ ಕುರಿತು ಉಲ್ಲೇಖಿಸಿದ್ದರು. ಆದರೆ, ಸರಕಾರ ಧರಂ ಸಿಂಗ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮಧ್ಯಾಂತರ ವರದಿಯಲ್ಲಿ ಧರಂ ಸಿಂಗ್‌ ಪ್ರಕರಣವನ್ನು ಉಲ್ಲೇಖಿಸಿದ್ದ ನ್ಯಾ ಸಂತೋಷ್ ಹೆಗ್ಡೆ, 2011ರ ಜುಲೈನಲ್ಲಿ ಸಲ್ಲಿಸಿದ ಅಂತಿಮ ವರದಿಯಲ್ಲಿ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ಆದರೆ ಅವರು 'ರಾಜ್ಯಪಾಲರ ಸೂಚನೆಯ ಮೇರೆಗೆ ವರದಿಯಲ್ಲಿ ಹೆಸರು ಬಿಟ್ಟಿರುವುದಾಗಿ ಸಮಜಾಯಿಶಿ ನೀಡಿದ್ದಾರೆ' ಎಂದು ಅರ್ಜಿಯಲ್ಲಿ ದೂರಲಾಗಿದೆ.

English summary
The ‘ghost’ returns to haunt former chief minister N. Dharam Singh who was named in the first report submitted by Lokayukta on illegal mining activities in the state, with the high court issuing notices to him and others, including the mines and geology department and to the office of the governor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X