ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈರಸ್ ಮಿಸ್ತ್ರಿ ಟಾಟಾ ಸಮೂಹದ ಹೊಸ ಮೇಸ್ತ್ರಿ

By Srinath
|
Google Oneindia Kannada News

cyrus-mistry-new-head-to-ratan-tata-group
ಮುಂಬೈ,ನ.24: ಖ್ಯಾತ ಉದ್ಯಮಿ ರತನ್ ಟಾಟಾ ಅಳೆದೂ ಸುರಿದೂ, ತಮ್ಮ ಸಾಮರ್ಥ್ಯಕ್ಕೆ ತಕ್ಕ, ಅರ್ಹ ವ್ಯಕ್ತಿಯನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ. ಸುಧೀರ್ಘ ಭವಿಷ್ಯವನ್ನು ಮನಗೊಂಡು ರತನ್ ಮಧ್ಯವಯಸ್ಕ ಮಿಸ್ತ್ರಿಗೆ ಮೇಸ್ತ್ರಿ ಕೆಲಸ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಟಾಟಾ ಸಂಸ್ಥೆಯಲ್ಲಿ ಸೈರಸ್ ಮಿಸ್ತ್ರಿಗಿಂತ ಘಟಾನುಘಟಿಗಳಿದ್ದಾರೆ. ಆದರೂ ಅವರನ್ನೆಲ್ಲ ಸರಿದೂಗಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿಯನ್ನು ಯುವಬಾಹುವಿಗೆ ಹೊರಿಸಲಾಗಿದೆ.

ಇದೇ ವೇಳೆ ರತನ್ ಟಾಟಾ ಉತ್ತರಾಧಿಕಾರಿ ಯಾರು ಎನ್ನುವ ಬಹುಕಾಲದ ಪ್ರಶ್ನೆಗೆ ಉತ್ತರ ನೀಡಿದ್ದು, 44 ವರ್ಷದ ಸೈರಸ್ ಪಲ್ಲೊಂಜಿ ಮಿಸ್ತ್ರಿ ಅವರನ್ನು 80 ಶತಕೋಟಿ ಡಾಲರ್ ಮೌಲ್ಯದ ಟಾಟಾ ಸಮೂಹದ ಸಾರಥಿಯನ್ನಾಗಿ ಮಾಡಿದ್ದಾರೆ. ಸರಿಯಾಗಿ ಇನ್ನೊಂದು ವರ್ಷಕ್ಕೆ ಅವರು ಪದಗ್ರಹಣ ಮಾಡಲಿದ್ದಾರೆ. ಅಲ್ಲಿಯವರೆಗೂ ಹಿರಿಯ ಟಾಟಾ ಬಳಿ ಪ್ರೊಬೆಷನ್ ನಲ್ಲಿರುತ್ತಾರೆ.

ಶಪೂರ್ಜಿ ಪಲ್ಲೊಂಜಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರನ್ನು ಟಾಟಾ ಸನ್ಸ್ ನಿರ್ದೇಶಕ ಮಂಡಳಿಯ ನೂತನ ಉತ್ತರಾಧಿಕಾರಿ ಎಂದು ಬುಧವಾರ ಅಧಿಕೃತವಾಗಿ ಘೋಷಿಸಲಾಗಿದೆ. ಶಪೂರ್ಜಿ ಪಲ್ಲೊಂಜಿ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಶೇ 18ರಷ್ಟು ಪಾಲು ಹೊಂದಿದೆ.

12,500 ಕೋಟಿ ರೂ ನಿರ್ಮಾಣ ರಂಗದ ದೈತ್ಯ ಸಂಸ್ಥೆಯಾಗಿರುವ ಶಪೂರ್ಜಿ ಪಲ್ಲೊಂಜಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರ ಹೆಗಲಿಗೆ ಈಗ ಹೆಚ್ಚಿನ ಜವಾಬ್ದಾರಿ ಬೀಳಲಿದೆ. ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್ ವರೆಗೆ ವೈವಿಧ್ಯಮಯ ವಹಿವಾಟು ನಡೆಸುತ್ತಿರುವ 4,00,000 ಕೋಟಿ ರೂ ಟಾಟಾ ಸಮೂಹ ನಿರ್ವಹಿಸುವ ಟಾಟಾ ಸನ್ಸ್‌ನ ಹೊಸ ಅಧ್ಯಕ್ಷರಾಗಲಿದ್ದಾರೆ.

ಮಿಸ್ತ್ರಿ ಅವರು ಟಾಟಾ ಸಮೂಹಕ್ಕೆ ಹೊಸಬರೇನೂ ಅಲ್ಲ. 2006ರಲ್ಲಿಯೇ ಇವರು ಟಾಟಾ ಸನ್ಸ್‌ನ ಆಡಳಿತ ಮಂಡಳಿಗೆ ನೇಮಕಗೊಂಡಿದ್ದರು. ಸದ್ಯಕ್ಕೆ ಅವರು ಟಾಟಾ ಸನ್ಸ್ ಮತ್ತು ಟಾಟಾ ಎಲ್‌ಎಕ್ಸಿ (ಭಾರತ) ನಿರ್ದೇಶಕರಾಗಿದ್ದಾರೆ. ರತನ್ ಟಾಟಾ ಅವರ ಉತ್ತರಾಧಿಕಾರಿ ಆಯ್ಕೆಗೆ ರಚಿಸಲಾಗಿದ್ದ ಐದು ಮಂದಿ ಸಮಿತಿಯ ಸದಸ್ಯರೂ ಆಗಿದ್ದರು.

1968ರ ಜುಲೈ 4ರಂದು ಜನಿಸಿರುವ ಸೈರಸ್, 1991ರಲ್ಲಿ ಶಪೂರ್ಜಿ ಪಲ್ಲೊಂಜಿ ಸಂಸ್ಥೆಗೆ ನಿರ್ದೇಶಕರಾಗಿ ಸೇರಿಕೊಂಡು ಸಂಸ್ಥೆಯ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿದರು. ಸದ್ಯಕ್ಕೆ ಈ ಸಂಸ್ಥೆಯಲ್ಲಿ 23 ಸಾವಿರದಷ್ಟು ಸಿಬ್ಬಂದಿ ದುಡಿಯುತ್ತಿದ್ದಾರೆ. ಭಾರತ ಸೇರಿದಂತೆ ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾದಲ್ಲಿಯೂ ವಹಿವಾಟು ನಡೆಸುತ್ತಿದೆ.

English summary
Cyrus Mistry emerged as the only consensus choice with the backing of current chairman Ratan Tata as Tata Group’s search for a successor. Several factors are said to have worked in Cyrus Mistry's favour: his age; the fact that his family holds the largest single equity block of 18.4% in Tata Sons; the tradition of every chairman of the group so far being a Parsi; his chemistry with Ratan Tata.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X