ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳನ ಮೇಲೆ 'ಕ್ಯೂರಿಯಾಸಿಟಿ' ಎಲ್ಲಿ ಇಳಿಯುತ್ತೆ?

By Srinath
|
Google Oneindia Kannada News

curiosity-where-lands-what-will-do-on-mars
ಫ್ಲೋರಿಡಾ, ನ.24: ಇಷ್ಟಕ್ಕೂ 'ಕ್ಯೂರಿಯಾಸಿಟಿ' ಎಲ್ಲಿ ಇಳಿಯುತ್ತದೆ ಮತ್ತು ಏನೆಲ್ಲ ಮಾಡುತ್ತದಪ್ಪಾ ಅಂತಂದರೆ ಅದು ಮಂಗಳ ಗ್ರಹದ ಮೇಲಿರುವ Gale Crater ಎಂಬ ಗುಡ್ಡದ ಮೇಲೆ ಇಳಿಯುತ್ತದೆ. ಇದು 150 ಕಿ.ಮೀ. ಅಗಲದ 5 ಕಿ.ಮೀ. ಎತ್ತರದ ಗುಡ್ಡ. 'ಕ್ಯೂರಿಯಾಸಿಟಿ' ಇದರ ಮೇಲೆಯೇ ಸರಿದಾಡುವುದು! ಹೀಗೇ ಹರಿದಾಡುತ್ತಿರುವಾಗ ಅದು ತನ್ನ ಮೈಕೈಗೆ ತಾಕುವ ಎಲ್ಲ ಧೂಳು ಮತ್ತು ಕಲ್ಲುಗಳನ್ನು ಪರಿಶೀಲಿಸುತ್ತಾ ಸಾಗುತ್ತದೆ.

'ಕ್ಯೂರಿಯಾಸಿಟಿ' ಎಷ್ಟು ಕಾಲ ಮಂಗಳ ಗ್ರಹದಲ್ಲಿರುತ್ತದೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಅದು ಕನಿಷ್ಠ ಎರಡು ವರ್ಷ ಕಾಲ ಬಾಳುವಂತಹುದಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಅದಕ್ಕಿಂತಲೂ ಹೆಚ್ಚು ಕಾಲ ಅದನ್ನು ಅಲ್ಲಿ ಅಧ್ಯಯನಕ್ಕೆ ಬಿಡುವ ಇರಾದೆ ನಾಸಾ ವಿಜ್ಞಾನಿಗಳಿಗೆ ಇದೆ.

ಗಮನಾರ್ಹವೆಂದರೆ ಈ ಹಿಂದಿನ ಸ್ಪಿರಿಟ್ ಮತ್ತು ಆಪರ್ಟುನಿಟಿ ಮೂರು ತಿಂಗಳ ಜೀವಿತಾವಧಿ ಹೊಂದಿದ್ದವು. ಆದರೆ ಇನ್ನೂ ಹೆಚ್ಚು ಕಾಲ ಅವು ಬಾಳಿ ಬದುಕಿದವು. ಆದರೆ ಸ್ಪಿರಿಟ್ ನಿರ್ಜೀವವಾಗಿದೆ ಎಂದು ನಾಸಾ ಮೊನ್ನೆಯಷ್ಟೇ ಪ್ರಕಟಿಸಿತು. ಅದೇ ಆಪರ್ಟುನಿಟಿ ಮಂಗಳ ಗ್ರಹದಲ್ಲಿ ಇನ್ನೂ ಅಂಡಲೆಯುತ್ತಿದೆ. ಬಹುಶಃ ಅದು 'ಕ್ಯೂರಿಯಾಸಿಟಿ'ಯನ್ನು ಮೀಟ್ ಮಾಡಬಹುದು!

ಮಂಗಳ ಗ್ರಹದಲ್ಲಿ ಉಗ್ರ ಸ್ವರೂಪದ ಚಳಿಯಿರುತ್ತದೆ. ಅದನ್ನು ತಡೆದುಕೊಳ್ಳುವಂತೆ 'ಕ್ಯೂರಿಯಾಸಿಟಿ' ಅನ್ನು ತಯಾರಿಸಲಾಗಿದೆ. ಅನಂತವಾದ, ಮಹತ್ತರ ಗುರಿ ಸಾಧನೆಗಾಗಿ ಇದೇ ಶನಿವಾರ ಮಂಗಳದತ್ತ ಮುಖ ಮಾಡಲಿರುವ 'ಕ್ಯೂರಿಯಾಸಿಟಿ'ಗೆ ಇಲ್ಲಿಂದಲೇ ಶುಭ ಪ್ರಯಾಣ ಕೋರೋಣ!

English summary
NASA Curiosity is not a life-detection mission, but it will lay the foundation for future efforts that could hunt for evidence of microbial Martians. Curiosity will touch down at Gale Crater, a 100-mile-wide (150 kilometers) hole in the ground with a mysterious 3-mile-high (5 km) mountain rising from its center. The rover will poke around Gale, scrutinizing and sampling the dirt and rocks it encounters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X