• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಲೆಯಾಳಿಗಳ ನಿದ್ದೆಗೆಡಿಸುತ್ತಿರುವ ಮಲೇಷ್ಯಾದ ಸೆಕ್ಸ್ ಸರಕು

By Srinath
|

ತಿರುವನಂತಪುರ, ನ23: ಮಲೇಷ್ಯಾದ ಸೆಕ್ಸ್ ಸರಕುಗಳಿಂದಾಗಿ ಮಲೆಯಾಳಿಗಳ ಕಣ್ಣಿಗೆ ನಿದ್ದೆ ಇಲ್ಲವಾಗಿದೆ. ಇದರಿಂದ ಕೇರಳದಲ್ಲಿ ರಾತ್ರಿ ಚಟುವಟಿಕೆಗಳು ಎಲ್ಲೆಂದರಲ್ಲಿ ಗರಿಗೆದರಿವೆ. ಕಾನೂನಬಾಹಿರವಾಗಿ ಸೆಕ್ಸ್ ಸರಕು ನುಸುಳುತ್ತಿರುವುದರಿಂದ ಆರೋಗ್ಯ ಇಲಾಖೆಯೂ ನಿದ್ದೆಗೆಟ್ಟು ಕೂತಿದೆ.

ಮಲೇಷ್ಯಾದ ಕಂಪನಿಗಳು ತಯಾರಿಸುತ್ತಿರುವ ಜೆಲ್, ನೊರೆ, ಗಿಡಮೂಲಿಕೆ ಗುಳಿಗೆ, ಶಿಷ್ನ ನಿಮಿರುವಿಕೆಯಂತಹ ಔಷಧಿ ಮತ್ತು ಷಂಡತ್ವ ನಿವಾರಕ ಔಷಧಿಗಳು ದೇವರ ನಾಡಿನಲ್ಲಿ ಬೆಡ್ ರೂಂ ಪ್ರವೇಶಿಸುತ್ತಿವೆ.

ಗುಪ್ತಾಂಗಳ ಮೇಲೆ ಸವರಬಹುದಾದ ಕ್ರೀಮ್, ಜೆಲ್ ಮುಂತಾದವನ್ನು ಮಲೇಷ್ಯಾದ ಸೆಲಾಂಗೊರಿನಲ್ಲಿ ಹೆಚ್ಚಾಗಿ ಉತ್ಪಾದಿಸಲಾಗುತ್ತಿದೆ. ಕುತೂಹಲದ ಸಂಗತಿಯೆಂದರೆ ಇವುಗಳನ್ನು ಯಾರು, ಎಲ್ಲಿ, ಹೇಗೆಲ್ಲ ಮಾರಾಟ ಮಾಡುತ್ತಿದ್ದಾರೆ ಎಂಬುದು ಸ್ಥಳೀಯ ಆಡಳಿತಕ್ಕೆ ರಹಸ್ಯವಾಗಿ ಉಳಿದಿದೆ. ಬಹುಸ್ತರಗಳಲ್ಲಿ ಬಹುವಲಯಗಳಲ್ಲಿ ಯಾರಿಗೂ ಅನುಮಾನ ಬಾರದಂತೆ ಇವುಗಳ ಮಾರಾಟ ಯಾವುದೇ ಎಗ್ಗಿಲ್ಲದೆ ಜನರ ಮಧ್ಯೆಯೇ ನಡೆಯುತ್ತಿದೆ.

ಹೆಚ್ಚು ಹೆಚ್ಚು ಸುಖ ಬಯಸುವ ಶ್ರೀಮಂತ ವರ್ಗದ ಜನರೇ ಇದರ ಫಲಾನುಭವಿಗಳು ಎನ್ನಲಾಗಿದೆ. ಈ ಸೆಕ್ಸ್ ಸಾಮಾನುಗಳು ದುಬಾರಿಯಾಗಿದ್ದರೂ ಹಿಂದೆಮುಂದೆ ನೋಡದೆ ಇವರು ಖರೀದಿಗೆ ನಿಲ್ಲುತ್ತಿದ್ದಾರೆ. ಉದಾಹರಣೆಗೆ ಸೆಕ್ಸ್ ಅನ್ನು ಹೆಚ್ಚಿಸುವ ಎಂಟು ಗ್ರಾಂ ಜೆಲ್ ಗೆ 3,000 ರುಪಾಯಿ ಬೆಲೆಯಿದೆ. ಕಾಸ್ಮೆಟಿಕ್ಸ್ ವಸ್ತುಗಳ ಮಧ್ಯೆ ಗುಪ್ತವಾಗಿ ಇವು ಗ್ರಾಹಕರ ಕೈಸೇರುತ್ತಿದೆ.

English summary
Malaysian-made sex-enhancing stimulants appear to be sexing up nocturnal activities in Kerala, but the influx of illegal imports of the libido-boosters into the state is worrying drug control officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X