ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಿವಯಸ್ಸಿನವರ ಅಕ್ರಮ ಸಂಬಂಧಗಳ ತಾಣ ಮಲೇಷ್ಯಾ

By Srinath
|
Google Oneindia Kannada News

pre-marital-sex-rises-in-malaysian-teens
ಮಲೇಷ್ಯಾ, ನ23: ಶಾಲೆ ಹಂತದಲ್ಲಿ ಹದಿಹರಯದ ಬಾಲಕ, ಬಾಲಕಿಯರು ಮದುವೆಗೂ ಮುನ್ನ ಸೆಕ್ಸ್ ಸುಖ ಕಾಣುತ್ತಿದ್ದಾರೆ. ಇದರ ಫಲವಾಗಿ ಮದುವೆಯೂ ಆಗದೆ ಹೆಣ್ಣುಮಕ್ಕಳು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಆ ಮಕ್ಕಳನ್ನು ರಸ್ತೆ ಬದಿ ಬಿಸಾಕಿ ಪರಾರಿಯಾಗುತ್ತಿದ್ದಾರೆ ಎಂಬ ಆಘಾತಕಾರಿ ವಿದ್ಯಮಾನ ಪೂರ್ವ ಮಲೇಷ್ಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.

ಸಮೀಕ್ಷೆಯ ಪ್ರಕಾರ ಬಲಿಷ್ಠ ಧಾರ್ಮಿಕ ತಳಹದಿಯನ್ನು ಹೊಂದಿದ್ದರೂ ಈ ಶಾಲೆಯಲ್ಲಿ ಇಂತಹ ಪ್ರಕರಣಗಳು ಅಧಿಕವಾಗಿರುವುದು ಆತಂಕಕಾರಿಯಾಗಿದೆ. ಶಾಲೆಯ ಮುಖ್ಯಸ್ಥೆ ಪ್ರೊ. ರೋಶ್ನಾ ಇಸ್ಮಾಯಿಲ್ ಹೇಳುವಂತೆ ಮದುವೆಯೇ ಆಗದ ಬಾಲಕ-ಬಾಲಕಿಯರಿಗೆ ಅಕ್ರಮ ಸಂಬಂಧದ ಫಲವಾಗಿ ಕಳೆದ ವರ್ಷ ಸುಮಾರು 50 ಸಾವಿರ ಮಕ್ಕಳು ಜನಿಸಿವೆ.

ಹೊಸತನ್ನು ಕಾಣಬೇಕು ಅನುಭವಿಸಬೇಕು ಎಂದು ಹದಿವಯಸ್ಸಿನ ಹಸಿ ಮನಸುಗಳು ತುಡಿತಕ್ಕೆ ಒಳಗಾಗುತ್ತಿವೆ. ಸೆಕ್ಸ್ ವೆಬ್ ಸೈಟ್ ನಲ್ಲಿ ಢಾಳಾಗಿ ಸಿಗುವ ಚಿತ್ರಗು ಮತ್ತು ವಿಡಿಯೋಗಳು ಈ ಅಬೋಧ ಮಕ್ಕಳನ್ನು ಹಾದಿ ತಪ್ಪಿಸುತ್ತಿವೆ. ಇದು ಸಾಮಾಜಿಕ ಕ್ಷೋಭೆಗೂ ದಾರಿಯಾಗಿದೆ ಎಂದು ರೋಶ್ನಾ ವಿಷಾದ ವ್ಯಕ್ತಪಡಿಸಿದ್ದಾರೆ.

English summary
A study by University Malaysia Sabah (UMS) reveals that many teenagers have engaged in sex before marriage. According to the study, despite a presence of strong religious and traditional values among the people in the East Malaysia state, there are still many teenagers who engaged in pre-martial sex.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X