ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗ್ನ ಚಿತ್ರಗಳು ಜಾಹೀರಾತುದಾರರಿಗೆ ಹೇಗೆ ಉದ್ರೇಕಕಾರಿ!?

By Srinath
|
Google Oneindia Kannada News

nude-girls-pix-good-for-you-and-advertisers
ಫಿನ್ಲೆಂಡ್, ನ 23: ಸುಂದರ ಮಹಿಳೆಯರ ಚಿತ್ರಗಳನ್ನು ನೋಡಿದ ತಕ್ಷಣ ಪುರುಷರ ಮೆದುಳು ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತದೆ ಎನ್ನುವುದು ಹಳೆಯ ವಿಚಾರವೇ. ಆದರೂ ಇತ್ತೀಚೆಗೆ ನಗ್ನ, ಅರೆ ನಗ್ನ ಮತ್ತು ಮೈತುಂಬಾ ಬಟ್ಟೆ ಧರಿಸಿದ ಸುಂದರಿಯರ ಚಿತ್ರಗಳನ್ನು ಪುರುಷರಿಗೆ ತೋರಿಸಿ, ಅವರು ಯಾವ ಯಾವ ಚಿತ್ರಕ್ಕೆ ಎಷ್ಟು ವೇಗವಾಗಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಸಮೀಕ್ಷೆಯೊಂದನ್ನು ನಡೆಸಲಾಗಿದೆ.

ಈ ನಗ್ನ ಚಿತ್ರಗಳ ಸಮೀಕ್ಷೆ ಅತ್ಯಂತ ಕುತೂಹಲಕಾರಿಯಾಗಿದೆ. ವಿದ್ಯುತ್ ತರಂಗಗಳಿಗಿಂತಲೂ ವೇಗವಾಗಿ ಪ್ರತಿಕ್ರಿಯಿಸುವ ಪುರುಷರ ಮೆದುಳಿನ ಮೇಲೆ ನಿಗಾಯಿಡಲಾಗಿತ್ತು. ನಗ್ನ ದೇಹದ ಸುರಸುಂದರಿಯ ಚಿತ್ರವನ್ನು ಪುರುಷರ ಮುಂದಿಟ್ಟಾಗ ಅವರ ಮೆದುಳು 0.2 ಸೆಕೆಂಡಿಗಿಂತ ವೇಗವಾಗಿ ಆ ಚಿತ್ರಗಳು ಅವರ ಮೆದುಳಿನಲ್ಲಿ ಪ್ರತಿಬಿಂಬಿತವಾಗುತ್ತವೆ.

ಆದರೆ ಸ್ವಿಮ್ ಸೂಟ್ ಧರಿಸಿದ ಅಥವಾ ಅರೆ ನಗ್ನ ಅಥವಾ ಸಂಪೂರ್ಣವಾಗಿ ಬೆತ್ತಲಾಗದ ಸುಂದರಿಯರ ಫೋಟೋಗಳನ್ನು ನೋಡಿದಾಗ ಅಷ್ಟೊಂದು ವೇಗವಾಗಿ ಪ್ರತಿಕ್ರಿಯಿಸುವುದಿಲ್ಲ. ಸ್ವಲ್ಪ ನಿಧಾನವಾಗಿ ಆ ಚಿತ್ರಗಳು ಪುರುಷರ ಚಿತ್ತಾಕರ್ಷಕವಾಗಿರುತ್ತವೆ.

ಇದನ್ನೇ ಆಧಾರವಾಗಿಟ್ಟುಕೊಂಡು ಪಾರದರ್ಶಕ ಉಡುಗೆತೊಟ್ಟ ಅಥವಾ ಅರೆನಗ್ನ ರೂಪದರ್ಶಿಯ ಫೋಟೋ ತೋರಿಸಿ, ಜಾಹೀರಾತುದಾರರು ಪುರುಷ ಗ್ರಾಹಕರನ್ನು ಸೆಳೆಯುವುದು ರಹಸ್ಯವೇನೂ ಅಲ್ಲ. ಅಂದರೆ ರೂಪದರ್ಶಿಯರಿಗೆ ಕಡಿಮೆ ಬಟ್ಟೆ ತೋರಿಸಿ, ಜಾಹೀರಾತುದಾರರು ತಮ್ಮ ಸರಕಿನ ಮಾರಾಟಕ್ಕೆ ಅಂಟಿಕೊಳ್ಳುತ್ತಾರೆ ಎಂಬುದು ಬೆತ್ತಲಾಗಿದೆ.

English summary
The scientists discovered that looking at pics nude girls makes the brain react quicker. And the results showed that it takes less than 0.2 seconds to process the image of a naked body- much less than when models are fully clothed or wearing swimsuits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X