ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಟೇಲಲ್ಲೇ ಆತ್ಮಹತ್ಯೆ ಮಾಡಿಕೊಂಡ ಅಡುಗೆಭಟ್ಟ

By Prasad
|
Google Oneindia Kannada News

Cook commits suicide in Yadgir
ಯಾದಗಿರಿ, ನ. 23 : ನಗರದ ಬಾಲಾಜಿ ದೇವಸ್ಥಾನದ ಹತ್ತಿರವಿರುವ ಶಾರದಾಂಬೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಶರಣಪ್ಪ ಏಡ್ರಾಮಿ (45) ಎಂಬ ವ್ಯಕ್ತಿ ಸೋಮವಾರ ತಡರಾತ್ರಿ ಹೋಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾನೆ.

ಈತ ಗುಲಬರ್ಗಾ ಜಿಲ್ಲೆಯ ಜೇವರ್ಗಿ ತಾಲೂಕಿನವನಾಗಿದ್ದು, ಕಳೆದ ಐದು ವರ್ಷಗಳಿಂದ ಶಾರದಾಂಬೆ ಹೋಟೆಲ್‌ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ತೀವ್ರ ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವುದು ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕರಣ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೋಸ್ಟ್ ಮಾರ್ಟಂ ಆದನಂತರ ಸಂಬಂಧಿಕರಿಗೆ ಆತನ ದೇಹವನ್ನು ಒಪ್ಪಿಸಲಾಯಿತು.

English summary
Sharanappa Edrami (45) a cook in Sharadambe hotel in Yadgir town committed suicide by handing in hotel itself. He was suffering from long illness. Sharanappa hails from Jevargi taluk in Gulbarga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X