ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಬಿಕ್ಕಟ್ಟು ಎದುರಿಸಲು ಸಿದ್ಧರಾಗಿ: ಇನ್ಫೋಸಿಸ್

By Mahesh
|
Google Oneindia Kannada News

S Gopalakrishnan
ಬೆಂಗಳೂರು, ನ.23: ಮತ್ತೊಮ್ಮೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆರ್ಥಿಕ ಕುಸಿತದ ಬಿರುಗಾಳಿ ಬೀಸಲಿದೆ ಎಂದು ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಸಹ ಸ್ಥಾಪಕ ಎಸ್ ಗೋಪಾಲಕೃಷ್ಣನ್ ಅವರು ಎಚ್ಚರಿಸಿದ್ದಾರೆ.

ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಉಂಟಾಗಿರುವ ಆರ್ಥಿಕ ಕುಸಿತದ ಪರಿಣಾಮ ಶೀಘ್ರದಲ್ಲೇ ಭಾರತಕ್ಕೆ ತಟ್ಟಲಿದೆ.

2008ರಲ್ಲಿ ಕಂಡ ಜಾಗತಿಕ ಆರ್ಥಿಕ ಕುಸಿತದಷ್ಟು ಪರಿಣಾಮಕಾರಿ ಅಲ್ಲದಿದ್ದರೂ ಯುಎಸ್ ಹಾಗೂ ಯುರೋಪ್ ಆರ್ಥಿಕ ಕುಸಿತದ ಬಗ್ಗೆ ಭಾರತದ ಐಟಿ ಕ್ಷೇತ್ರದ ಕಂಪನಿಗಳು ಸಕಾಲದಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಎಸ್ ಗೋಪಾಲಕೃಷ್ಣನ್ ಹೇಳಿದ್ದಾರೆ.

ಮುಂಬರುವ 8-10 ವರ್ಷಗಳಲ್ಲಿ 65 ರಿಂದ 220 ಬಿಲಿಯನ್ ಡಾಲರ್ ಮೌಲ್ಯಕ್ಕೆ ಐಟಿ ಉದ್ಯಮ ಬೆಳೆಯುವ ನಿರೀಕ್ಷೆಯಿದೆ. ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಷನ್, ರಿಸೋರ್ಸ್ ಮ್ಯಾನೇಜ್ಮೆಂಟ್ ಮುಂಬರುವ ದಿನಗಳಲ್ಲಿ ಹೆಚ್ಚು ಚಾಲ್ತಿಗೆ ಬರುವ ತಂತ್ರಜ್ಞಾನ ಎಂದು ಗೋಪಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

English summary
Another Recession may hit India and its Information Technology (IT) sector soon. The latest statement on the recession came when the executive co-chairman of IT-giant Infosys, S Gopalakrishnan hinted that another recession may leave a profound impact on Indian IT industry if economic crisis in US and in European countries continue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X