ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೀಕರ್ ಮೀರಾ ಮನೆ ಬಾಡಿಗೆ ಬಾಕಿ 1.98 ಕೋಟಿ ರೂ

By Mahesh
|
Google Oneindia Kannada News

Meira Kumar
ನವದೆಹಲಿ, ನ. 21: ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ತಮ್ಮ ತಂದೆ ದಿವಂಗತ ಜಗಜೀವನ್‌ರಾಂ ಮರಣದ ಬಳಿಕ ನಂ.6, ಕೃಷ್ಣ ಮೆನನ್ ಮಾರ್ಗದ ನಿವಾಸದಲ್ಲಿ 1986ರಿಂದ ವಾಸವಾಗಿದ್ದಾರೆ. ಆದರೆ, ಈ ವರೆಗೂ ಬಾಡಿಗೆ ಕಟ್ಟಿಲ್ಲ ಎಂದು ನಗರಾಭಿವೃದ್ಧಿ ಸಚಿವಾಲಯದ ಎಸ್ಟೇಟ್ಸ್ ವಿಭಾಗ 1.98 ಕೋಟಿ ರೂ. ಮೊತ್ತದ ಬಿಲ್ ರೆಡಿ ಮಾಡಿದೆ.

ದಿವಂಗತ ಇಂದ್ರಾಣಿ ದೇವಿಯ ಕುಟುಂಬ ಸದಸ್ಯರು ಅಂದರೆ ಮೀರಾ ಕುಮಾರ್ ಸೇರಿದಂತೆ 10 ಮಂದಿಯ ಪಟ್ಟಿಯನ್ನು ಹಾಗೂ ಅವರು ಸರ್ಕಾರಕ್ಕೆ ಪಾವತಿಸಬೇಕಾಗಿರುವ ಬಾಕಿಯ ವಿವರಗಳನ್ನು ಎಸ್ಟೇಟ್ಸ್ ವಿಭಾಗ ನೀಡಿದೆ. ಆರ್ ಟಿಐ ಅರ್ಜಿಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ಹೊರಬಿದ್ದಿದೆ.

ಮೀರಾ ಕುಮಾರ್ 1,98,22,723 ರೂ. ಮೊತ್ತವನ್ನು ಬಾಕಿಯಿಟ್ಟಿದ್ದಾರೆ ಹಾಗೂ ಈ ಮೊತ್ತಕ್ಕಾಗಿ ಅವರಿಗೆ ಬಿಲ್ ನೀಡಲಾಗಿದೆ. ಸರ್ಕಾರಿ ಬಂಗಲೆಗಳನ್ನು ಉಪಯೋಗಿಸುವ ಹಕ್ಕು ಕಳೆದುಕೊಂಡರೂ ಮೀರಾ ಅವರ ಕುಟುಂಬದವರು ವಾಸವಾಗಿದ್ದು, ಬಾಡಿಗೆ ಬಾಕಿ ಮೊತ್ತಗಳನ್ನು ಪಾವತಿಸಿಲ್ಲ ಎಂದು ವಿವರಗಳನ್ನು ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಶ್ಚಂದ್ರ ಅಗರ್‌ವಾಲ್ ಹೇಳಿದ್ದಾರೆ.

ದಿ. ಶ್ರೀಮತಿ ಇಂದ್ರಾಣಿ ದೇವಿಯ ಕುಟುಂಬ ಸದಸ್ಯರು 6, ಕೃಷ್ಣ ಮೆನನ್ ಮಾರ್ಗ್, ನವದೆಹಲಿಯ ನಿವಾಸವನ್ನು 30.11.2002ರಂದು ತೆರವುಗೊಳಿಸಲಾಗಿದೆ. ಈ ಬಗ್ಗೆ ಸೂಚನೆಯನ್ನು ಸಿಪಿಡಬ್ಲೂಡಿ, ಎನ್‌ಡಿಎಂಸಿ, ಎಸ್ಟೇಟ್ಸ್ ನಿರ್ದೇಶಕ ಮತ್ತು ಇತರ ಸಂಬಂಧಿತ ಪ್ರಾಧಿಕಾರಗಳಿಗೆ ನೀಡಲಾಗಿದೆ.

ಎನ್‌ಡಿಎಂಸಿ ಕೂಡಲೇ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿತು. ಆ ಬಳಿಕ ದಿ. ಶ್ರೀಮತಿ ಇಂದ್ರಾಣಿ ದೇವಿ ಕುಟುಂಬದ ಯಾವುದೇ ಸದಸ್ಯರು ಅಲ್ಲಿ ವಾಸಿಸಿಲ್ಲ. ಯಾವುದೇ ಬಾಕಿ ಮೊತ್ತ ಉಳಿಸಿಕೊಂಡಿಲ್ಲ ಎಂದು ಸ್ಪೀಕರ್ ಕಚೇರಿ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.

English summary
Lok Sabha Speaker Meira Kumar has been asked to pay Rs 1.98 crore as house rent for a bunglow she owns at 6 Krishna Menon Marg, said the Union government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X