ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬ್ಬನೇ ಮಗ, ಪ್ಲೀಸ್ ಜಾಮೀನು ಕೊಡಿ: ಜ್ಯೂ. ಕಟ್ಟಾ

|
Google Oneindia Kannada News

Katta Jagadish
ಬೆಂಗಳೂರು, ನ 22: ನಾನು ಒಬ್ಬನೇ ಮಗ, ಕಾಯಿಲೆ ಪೀಡಿತ ನನ್ನ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಮನೆ ನಿರ್ವಹಣೆ ಕೂಡಾ ಕಷ್ಟವಾಗುತ್ತಿದೆ. ಹೀಗಾಗಿ ದಯವಿಟ್ಟು ನನಗೆ ಅನುಕಂಪದ ಆಧಾರದ ಮೇಲೆ ಜಾಮೀನು ನೀಡಿ ಎಂದು ಪಾಲಿಕೆ ಸದಸ್ಯ ಕಟ್ಟಾ ಜಗದೀಶ್ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಅಪ್ಪನಿಗೆ ಕ್ಯಾನ್ಸರ್ ಇದೆ. ಅವರನ್ನು ಲಂಡನ್ ಗೆ ಕರೆದುಕೊಂಡು ಹೋಗಬೇಕಾದರೆ ಜೊತೆಯಲ್ಲಿ ನಾನು ಕೂಡ ಇರಬೇಕಾಗುತ್ತದೆ. ತಂದೆಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ದಯವಿಟ್ಟು ನನಗೆ ಜಾಮೀನು ನೀಡಿ ಎಂದು ಕಟ್ಟಾ ಜಗದೀಶ್ ಕೋರಿದ್ದಾರೆ. ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 8ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕಟ್ಟಾ ಸುಬ್ರಮಣ್ಯ ನಾಯ್ದು ಪುತ್ರ ಕಟ್ಟಾ ಜಗದೀಶ್ ಜಾಮೀನು ಕೋರಿ ಲೋಕಾಯುಕ್ತ ನ್ಯಾಯಾಲಯಕ್ಕೆ ಸೋಮವಾರ (ನ 21) ಮತ್ತೆ ಅರ್ಜಿ ಸಲ್ಲಿಸಿದ್ದಾರೆ.

ನನ್ನ ತಾಯಿ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಕ್ತದೊತ್ತಡ, ಮಂಡಿ ನೋವಿನ ಚಿಕಿತ್ಸೆ ಮಾಡಿಸಬೇಕಿದೆ. ನನಗೂ ಒಂದು ಚಿಕ್ಕ ಮಗುವಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಅನುಕಂಪದ ಆಧಾರದ ಮೇಲೆ ನನಗೆ ಪ್ಲೀಸ್.. ಜಾಮೀನು ನೀಡಿ ಎಂದು ಕಟ್ಟಾ ಜಗದೀಶ್ ಬೇಡಿ ಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಾ ಜಗದೀಶ್ ಅವರಿಗೆ ಜಾಮೀನು ನೀಡಲು ಕೋರ್ಟ್ ಈ ಹಿಂದೆಯೇ ನಿರಾಕರಿಸಿತ್ತು. ಈದೀಗ ಮತ್ತೆ ಜೂನಿಯರ್ ಕಟ್ಟಾ ತಂದೆಯ ಅನಾರೋಗ್ಯ ಸಂಬಂಧ ಜಾಮೀನು ನೀಡಬೇಕೆಂದು ಲಿಖಿತ ಹೇಳಿಕೆ ನೀಡಿ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ಸಂಬಂಧ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

English summary
Tainted BBMP member Katta Jagadish Naidu appealed to Lokayukta Special court for grant him a bail on his fathers health reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X