ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಇಂಡಿಯಾ ಮೇಲೆಕ್ಕೇರಲು 30,000 ಕೋಟಿ ಬೇಕಂತೆ!

By Mahesh
|
Google Oneindia Kannada News

Air India Bailout
ನವದೆಹಲಿ, ನ.22: ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಇನ್ನೂ ಆರ್ಥಿಕ ಬಿಕ್ಕಟ್ಟಿನ ಪಂಜರದಿಂದ ಹೊರ ಬಂದಿಲ್ಲ. ಈ ನಡುವೆ ಏರ್ ಇಂಡಿಯಾ ವಿಮಾನಗಳು ಮತ್ತೆ ಮೇಲಕ್ಕೇರುವಂತೆ ಮಾಡಲು ಸರ್ಕಾರ ಸಹಾಯ ಹಸ್ತ ಚಾಚುತ್ತಿದೆ.

ಉನ್ನತ ಮಟ್ಟದ ಕಾರ್ಯದರ್ಶಿಗಲ ಸಭೆಯಲ್ಲಿ ಏರ್ ಇಂಡಿಯಾ ಪುನುರುತ್ಥಾನಕ್ಕೆ ಸುಮಾರು 30,000 ಕೋಟಿ ರು ನೀಡಲು ಒಮ್ಮತದ ನಿರ್ಧಾರಕ್ಕೆ ಬರಲಾಯಿತು. ಏರ್ ಇಂಡಿಯಾ ಸಂಸ್ಥೆ ಮತ್ತೆ ಲಾಭದಾಯಕ ಸ್ಥಿತಿಗೆ ಮರಳುವವರೆಗೂ ಸರ್ಕಾರದ ಬಂಡವಾಳ ಹೂಡಿಕೆ ಮುಂದುವರೆಸಲಿದೆಯೇ ಎಂಬುದರ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಆದರೆ, ಈ ಬೇಲ್ ಔಟ್ ಯೋಜನೆಗೆ ಹಲವರ ವಿರೋಧ ವ್ಯಕ್ತವಾಗಿದೆ. ಏರ್ ಲೈನ್ ಗೆ ಸಹಾಯ ಹಸ್ತ ಚಾಚುವ ಮೂಲಕ ಖಾಸಗಿಯವರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುವುದೇ ಸರ್ಕಾರದ ಉದ್ದೇಶ ಎನ್ನಲಾಗುತ್ತಿದೆ.

ಏರ್ ಇಂಡಿಯಾ ಸಂಸ್ಥೆ 2018ರ ಆರ್ಥಿಕ ವರ್ಷದ ಕೊನೆಗೆ ಲಾಭದಾಯಕ ಸಂಸ್ಥೆಯಾಗಿ ಹೊರ ಹೊಮ್ಮಲಿದೆ ಎಂದು ಸಮಿತಿ ಲೆಕ್ಕಾಚಾರ ಹಾಕಿ ಹೇಳುತ್ತಿದೆ. ಲೀಸ್ ಆಧಾರದ ಮೇಲೆ ಏರ್ ಕ್ರಾಫ್ಟ್ ಬಳಸುವ ಬಗ್ಗೆ ಕೂಡಾ ಚಿಂತಿಸಲಾಗಿದೆ.

ಕಳೆದ ದಶಕದಲ್ಲಿ ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿ ಗೋ ಇಂಡಿಗೋ ಸಂಸ್ಥೆ ಮಾತ್ರ ಸ್ವಲ್ಪಮಟ್ಟಿನ ಲಾಭ ಪಡೆದಿದೆ. ಉಳಿದಂತೆ ಕಿಂಗ್ ಫಿಷರ್ ಸೇರಿ ಎಲ್ಲಾ ಸಂಸ್ಥೆಗಳು ನಷ್ಟದಲ್ಲೇ ವಿಮಾನವನ್ನು ಆಕಾಶದಲ್ಲಿ ಹಾರಿಸುತ್ತಿದೆ.

English summary
With the cash strapped Kingfisher airlines barely getting out of the financial crunch, the government has to deal with the financial woes of Air India. A panel of secretaries has voted in favour of providing support of Rs 30,000 crore to Air India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X