ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುವತಿಯರಿಗೆ ಕಂಟಕವಾಗಿದ್ದ ಸಯನೈಡ್ ಮೋಹನ್ ವಿಚಾರಣೆ ಆರಂಭ

By Srinath
|
Google Oneindia Kannada News

cyanide-mohan-kumar-hearing-begins-mangalore-court
ಮಂಗಳೂರು, ನ.22: ಯುವತಿಯರ ಸರಣಿ ಹತ್ಯಾ ಪ್ರಕರಣದ ಆರೋಪಿ, ಶಿಕ್ಷಕ ಮೋಹನ್‌ಕುಮಾರ್ ವಿಚಾರಣೆ ಮಂಗಳೂರು ತ್ವರಿತಗತಿ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾಗಿದೆ. ಬರೋಬ್ಬರಿ 20 ಯುವತಿಯರಿಗೆ ಸಯನೈಡ್ ನೀಡಿ ಹತ್ಯೆ ಮಾಡಿದ ಆರೋಪ ಮೋಹನ್‌ಕುಮಾರನ ಮೇಲಿದೆ.

ಕುತೂಹಲದ ವಿಷಯವೆಂದರೆ ಮೋಹನ್‌ಕುಮಾರ್ ತಾನೇ ವಕೀಲನಾಗಿ ತನ್ನ ವಿರುದ್ಧದ ಪ್ರಕರಣಗಳ ವಿಚಾರಣೆಯಲ್ಲಿ ವಾದ ಮಂಡಿಸುತ್ತಿದ್ದಾನೆ. ಮಂಗಳೂರಿನ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ನಿಂಗನ ಗೌಡ ಜಂಟ್ಲಿ ವಿಚಾರಣೆ ನಡೆಸಿದರು.

ತನಗೆ ಯಾವ ವಕೀಲರೂ ಬೇಡ. ತಾನೇ ವಾದಿಸುವುದಾಗಿ ಆರೋಪಿ ಮೋಹನ್ ಕುಮಾರ್ ಕಳೆದ ಅ.20ರಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದ್ದ. ಇದಕ್ಕಾಗಿ ಆತ ಕಳೆದ ಎರಡು ವರ್ಷಗಳಲ್ಲಿ ಹಲವು ಕಾನೂನು ಪುಸ್ತಕಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದಾನೆ. ತನ್ನ ವಿರುದ್ಧ ಸಿಒಡಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾನೆ ಎಂಬುದು ಅವನ ಇಂದಿನ ವಾದಗಳಿಂದ ಸಾಬೀತಾಗುತ್ತಿತ್ತು.

ದೋಷಾರೋಪ ಪಟ್ಟಿಯಲ್ಲಿ ಏನಿದೆ, ಅದಕ್ಕೆ ಉತ್ತರವಾಗಿ ನ್ಯಾಯಾಧೀಶರ ಎದುರು ತಾನೇನು ಹೇಳಬೇಕು ಎಂಬುದನ್ನು ಮೋಹನ್ ಮೊದಲೇ ಹಾಳೆಯಲ್ಲಿ ಬರೆದಿಟ್ಟುಕೊಂಡಿದ್ದ. ಸಾಕ್ಷಿಯ ಹೇಳಿಕೆ ಬಳಿಕ ತಾನು ಬರೆದಿಟ್ಟುಕೊಂಡಿದ್ದ ಹೇಳಿಕೆಯನ್ನು ಆತ ಓದಿ ಹೇಳುತ್ತಿದ್ದ.

ಎರಡು ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಯುವತಿಯರ ಸರಣಿ ಕೊಲೆ ಪ್ರಕರಣದ ಆರೋಪಿ ಮೋಹನ್‌ಕುಮಾರನನ್ನು 2009ರ ಅಕ್ಟೋಬರ್ 11ರಂದು ಬಂಟ್ವಾಳ ಪೊಲೀಸರು ಬಂಧಿಸಿದ್ದರು.

English summary
The hearing of teacher-turned-serial killer Cyanide Mohan Kumar began in the fast track court on Monday November 21. The whole state was shocked by the serial murders of women and Bantwal police arrested Mohan on October 21, 2009.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X