• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ಅಂತಾರಾಜ್ಯ ವೇಶ್ಯಾವಾಟಿಕೆ ಜಾಲ ಬಯಲು

By Prasad
|

ಬೆಂಗಳೂರು, ನ. 22 : ಬ್ರಿಗೇಡ್ ರಸ್ತೆಯಲ್ಲಿರುವ ಒಂದು ಐಷಾರಾಮಿ ಹೊಟೇಲ್ ಮೇಲ್ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಅಂತಾರಾಜ್ಯ ವೇಶ್ಯಾವಾಟಿಕೆ ಜಾಲವನ್ನು ಬಯಲಿಗೆಳೆದಿದ್ದಾರೆ. ದಾಳಿಯಲ್ಲಿ 21 ವರ್ಷದ ಉಜ್ಬೇಕಿಸ್ತಾನದ ಇಬ್ಬರು ಯುವತಿಯರು ಸೇರಿದಂತೆ ಮೂವರು ಮಹಿಳೆಯರು ಮತ್ತು ಮೂವರು ಪಿಂಪ್ ಗಳನ್ನು ಬಂಧಿಸಲಾಗಿದೆ.

ಕಳೆದ ವರ್ಷ ಪ್ರವಾಸಿಯಾಗಿ ಭಾರತಕ್ಕೆ ಬಂದಿದ್ದ ಗುಲ್ನೋಜ್ ಮತ್ತು ಸಬಿರೋವಾ ತಮ್ಮ ದೇಶಕ್ಕೆ ಮರಳದೆ ವೇಶ್ಯಾವಾಟಿಕೆಯಲ್ಲಿ ನಿರತರಾದರು. ಮೆಟ್ರೋ ನಗರದ ವಿಟಪುರುಷರನ್ನು ಬಲೆಗೆ ಹಾಕಿಕೊಳ್ಳುವುದನ್ನೇ ಕಾಯಕವನ್ನಾಗಿ ಮಾಡಿಕೊಂಡರು ಎಂದು ಸಹಾಯಕ ಪೊಲೀಸ್ ಆಯುಕ್ತ ಎಸ್ ವಿ ಗುಳೇದ್ ತಿಳಿಸಿದರು.

ತಿಂಗಳಿಗೆ ಏನಿಲ್ಲೆಂದರೂ 5 ಲಕ್ಷ ರು. ಗಳಿಸುತ್ತಿದ್ದ ಗುಲ್ನೋಜ್ ಮಹಾ ಕಿಲಾಡಿ. ಕ್ರೈಂ ಬ್ರಾಂಚ್ ಪೊಲೀಸರರಿಗೆ ಸಿಕ್ಕಬಾರದೆಂದು ಊರಿಂದೂರಿಗೆ ಸ್ಥಳ ಬದಲಾಯಿಸುತ್ತಿದ್ದಳು. ಹೊಟೇಲ್ ಬ್ರಿಗೇಡ್ ಪ್ಯಾಲೇಸ್‌ನ ಮಾಲಿಕ ಸೈಯದ್ ಉಸ್ಮಾನ್ ಕೂಡ ಈ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆತನೇ ಗುಲ್ನೋಜ್ ಮತ್ತು ಕೆಲ ಹೆಂಗಸರನ್ನು ಆಂಧ್ರಪ್ರದೇಶದಿಂದ ಕರೆತಂದಿದ್ದ.

ದಾಳಿಯಾಗುವ ಸುದ್ದಿ ತಿಳಿಯುತ್ತಿದ್ದಂತೆ ಉಸ್ಮಾನ್ ಕಾಲಿಗೆ ಬುದ್ಧಿ ಹೇಳಿದ್ದಾನೆ. ಆತನನ್ನು ಹಿಡಿಯಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ. ಇಬ್ಬರು ಮಹಿಳೆಯರೊಂದಿಗೆ ರಾಕೇಶ್, ಸೈಯದ್ ಸಮೀರ್ ಮತ್ತು ಸಂದೀಪ್ ಎಂಬ ಪಿಂಪ್ ಗಳನ್ನು ಬಂಧಿಸಲಾಗಿದೆ. ಜೊತೆಗೆ 24 ವರ್ಷದ ವೇಶ್ಯೆ ಪರಿ ಎಂಬ ಆಂಧ್ರದ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

English summary
The sleuths of the Central Crime Branch (CCB) raided a posh hotel on Brigade road and busted an inter-state prostitution racket. 2 women from Uzbekistan along with 3 pimps have been arrested. Hotel Brigade Palace owner, the kingpin is absconding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X