ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ, ಮಕ್ಕಳು ಮಲಗಿದ್ದ ಗುಡಿಸಲಿಗೇ ಬೆಂಕಿ ಹಚ್ಚಿದ ಗಂಡ

By Rajendra
|
Google Oneindia Kannada News

Angry man sets fire to his hut
ಹೊಸದುರ್ಗ, ನ.22: ಬಾಗಿಲು ತೆಗೆಯಲಿಲ್ಲವೆಂಬ ಸಿಟ್ಟಿಗೆ ಗಂಡನೊಬ್ಬ ತನ್ನ ಹೆಂಡತಿ ಮಕ್ಕಳು ಮಲಗಿದ್ದ ಗುಡಿಸಲಿಗೇ ಬೆಂಕಿ ಹಚ್ಚಿರುವ ಘಟನೆ ಸೋಮವಾರ (ನ.21) ಬೆಳಗಿನಜಾವ ತಾಲ್ಲೂಕಿನ ಬಲ್ಲಾಳಸಮುದ್ರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಂಜುಳ (35) ತನ್ನ ಮಗ ಚೇತನ (4), ಮಗಳು ಪ್ರಿಯಾಂಕ(7) ಹಾಗೂ ತಂದೆ,ತಾಯಿಯೊಂದಿಗೆ ತನ್ನ ಗುಡಿಸಲಿನಲ್ಲಿ ಮಲಗಿದ್ದಾಗ ಬೆಳಗಿನಜಾವ ಗಂಡ ಲಕ್ಷ್ಮಣನು ಬಾಗಿಲು ತಟ್ಟಿದ್ದು, ಗಂಡನು ಗಲಾಟೆ ಮಾಡುತ್ತಾನೆ ಎಂಬ ಉದ್ದೇಶದಿಂದ ಮಂಜುಳ ಬಾಗಿಲು ತೆಗೆಯದಿದ್ದಾಗ ಲಕ್ಷ್ಮಣನು ಗುಡಿಸಲಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಗುಡಿಸಲಿಗೆ ಬೆಂಕಿ ಬಿದ್ದಿರುವ ಬಗ್ಗೆ ತಿಳಿದ ಮಂಜುಳ ಎಲ್ಲರನ್ನೂ ಗುಡಿಸಲಿನಿಂದ ಹೊರಗೆ ಕರೆದುಕೊಂಡು ಬಂದಿದ್ದು, ಯಾರಿಗೂ ಅಪಾಯವಾಗಿರುವುದಿಲ್ಲಾ ಆದರೆ ಗುಡಿಸಲು ಸುಟ್ಟು ಸುಮಾರು 15,000 ರೂಪಾಯಿಯಷ್ಟು ನಷ್ಟವುಂಟಾಗಿದೆ. ಬೆಳಿಗ್ಗೆ ಲಕ್ಷ್ಮಣನು ಮಂಜುಳ ರವರಿಗೆ ಪೋನ್ ಮಾಡಿ ಈ ಸಾರಿ ಬದುಕಿದ್ದೀಯ, ಇನ್ನೊಂದು ಸಾರಿ ನೀನು ಮಲಗಿದ್ದಾಗ ಬೆಂಕಿ ಹಚ್ಚಿ ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮಂಜುಳ ದೂರು ನೀಡಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ. (ಒನ್‌ಇಂಡಿಯಾ ಕನ್ನಡ)

English summary
An angry man set fire to his cottage in Hosadurga taluk Ballalasamudra village after his wife denied to open the door. The husband came back home Monday (Nov 21) morning. He knocked the door of his hut in which his wife and children were sleeping. He went wild and set fire after his wife refused to open the door. However, everyone has mysteriously escaped. A police case has been filed against the man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X