ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿಗೆ ಬೆಂಕಿ, ನೋ ಸಿಓಡಿ, ಸಿಬಿಐ ತನಿಖೆ:ಮೇಯರ್

By Mahesh
|
Google Oneindia Kannada News

Mayor Sharadamma
ಬೆಂಗಳೂರು, ನ.21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಅನೆಕ್ಸ್ ಕಟ್ಟಡದಲ್ಲಿ ಸಂಭಿವಿಸಿದ ಅಗ್ನಿ ಆಕಸ್ಮಿಕದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.

ಸಾವಿರಾರು ಕೋಟಿ ಹಗರಣದ ಮಹತ್ವದ ದಾಖಲೆಗಳೆಲ್ಲ ಸುಟ್ಟು ಭಸ್ಮವಾಗಿವೆ ಎಂಬ ವರದಿ ನೋಡಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಕಳವಳಗೊಂಡಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ಮೇಯರ್ ಶಾರದಮ್ಮ ಹೇಳಿದರು.

ಅ.28ರಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರರಿಗೆ 'ಪೌರ ಸನ್ಮಾನ' ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರೊಡನೆ ಹೆಚ್ಚಿನ ಚರ್ಚೆ ನಡೆಸಲಾಗಿದೆ. ಬಿಬಿಎಂಪಿ ಕಟ್ಟಡದ ಬೆಂಕಿ ಆಕಸ್ಮಿಕ ಬಗ್ಗೆ ಗೃಹ ಇಲಾಖೆ ನಿರ್ದೇಶನದಂತೆ ಮಾಹಿತಿ ಒದಗಿಸುತ್ತಿದ್ದೇವೆ ಎಂದು ಶಾರದಮ್ಮ ಹೇಳಿದರು.

ಓವರ್ ಟು ಗೃಹ ಸಚಿವ ಅಶೋಕ್: ಬಸವನಗುಡಿಯಲ್ಲಿ ಬಸವಣ್ಣನಿಗೆ ಕಡ್ಲೇಕಾಯಿ ತುಲಾಭಾರ ಸೇವೆ ಸಲ್ಲಿಸಿ ಐತಿಹಾಸಿಕ ಪರಿಷೆಗೆ ಚಾಲನೆ ಕೊಟ್ಟು ಹೊರ ಬಂದ ಅಶೋಕ್ ಅವರು ಬಿಬಿಎಂಪಿ ಬೆಂಕಿ ಪ್ರಕರಣದ ಬಗ್ಗೆ ತಣ್ಣಗೆ ಉತ್ತರಿಸಿದರು.

ಬಿಬಿಎಂಪಿ ಕಟ್ಟಡದ ಮೂರನೇ ಮಹಡಿಯಲ್ಲಿ ಮಹತ್ವದ ದಾಖಲೆಗಳಿರಲಿಲ್ಲ. ಪೊಲೀಸ್ ಇಲಾಖೆ ಕಡತಗಳಿತ್ತು ಎಂದು ಪ್ರಾಥಮಕ ವರದಿಯಿಂದ ತಿಳಿದುಬಂದಿದೆ.

ಎಲ್ಲೆಡೆ ಸಿಸಿಟಿವಿ ಅಳವಡಿಸಿರುವುದರಿಂದ ಈ ದುಷ್ಕೃತ್ಯ ಎಸೆಗಿದವರನ್ನು ಸುಲಭವಾಗಿ ಕಂಡು ಹಿಡಿಯಬಹುದು ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಸಿಒಡಿ ಅಥವಾ ಸಿಬಿಐ ತನಿಖೆ ಅಗತ್ಯವಲ್ಲ. ಈ ಕೃತ್ಯ ಎಸೆಗಿದವರು ಯಾರೇ ಆಗಲಿ ಶಿಕ್ಷಿಸಲಾಗುವುದು ಎಂದು ಅಶೋಕ್ ಸ್ಪಷ್ಟಪಡಿಸಿದರು.

English summary
Mayor Sharadamma said investigation on BBMP building fire accident is under progress, Home Minister R Ashok has constituted four teams to probe this case. R Ashok said no COD or CBI enquiry is required as our police will crack this case soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X