ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್‌ಪಾತ್ ಮೇಲೆ ಗಾಡಿ ಏರಿಸಿದರೆ ಲೈಸೆನ್ಸ್ ರದ್ದು

By Prasad
|
Google Oneindia Kannada News

Footpath drivers beware
ಬೆಂಗಳೂರು, ನ. 21 : ಕಿಕ್ಕಿರಿದು ತುಂಬಿದ ರಸ್ತೆಯ ಮೇಲೆ ಹೋಗಲು ದಾರಿಯಿಲ್ಲವೆಂದು ಕಾಲುದಾರಿಯ ಮೇಲೆ ಬೈಕು ಅಥವಾ ಇನ್ನಾವುದೇ ವಾಹನವನ್ನು ಹತ್ತಿಸಿದರೆ ಬೆಂಗಳೂರಿನ ನಾಗರಿಕರು ಕಷ್ಟಪಟ್ಟು ಪಡೆದ ಡ್ರೈವಿಂಗ್ ಲೈಸೆನ್ಸ್ ಅನ್ನು ಕಳೆದುಕೊಳ್ಳಬೇಕಾಗುತ್ತದೆ.

ನಾಗರಿಕರ ವೇದಿಕೆ ಇತ್ತೀಚಿಗೆ ನಡೆಸಿದ ಸಂವಾದದಲ್ಲಿ ಟ್ರಾಫಿಕ್ ತಜ್ಞರು ನೀಡಿರುವ ಕೆಲ ಸಲಹೆಗಳ ಆಧಾರದ ಮೇಲೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಲಾಯಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸಂಚಾರಿ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಮೇಲಿಂದ ಮೇಲೆ ನಿಯಮ ಉಲ್ಲಂಘಿಸುವವರ ಲೈಸೆನ್ಸನ್ನು ಕಿತ್ತುಕೊಂಡು ಮೋಟಾರು ವಾಹನ ಕಾಯ್ದೆ, 1988ರ ಅಡಿಯಲ್ಲಿ ಲೆಸೆನ್ಸ್ ರದ್ದುಪಡಿಸಲು ಪ್ರಾದೇಶಿಕ ಸಂಚಾರ ಅಧಿಕಾರಿಗೆ ಶಿಫಾರಸು ಮಾಡಲಿದ್ದಾರೆ. ಈಗಾಗಲೆ ಇದನ್ನು ಜಾರಿಗೆ ತರಲಾಗಿದ್ದು ಕೇವಲ 10 ದಿನಗಳಲ್ಲಿ 300ಕ್ಕೂ ಹೆಚ್ಚು ಲೈಸೆನ್ಸ್ ಗಳನ್ನು ರದ್ದುಪಡಿಸಲು ಆರ್ಟಿಓಗೆ ರವಾನಿಸಲಾಗಿದೆ.

ಬೆಂಗಳೂರಿನ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಆಮೆಗತಿಯಲ್ಲಿ ಸಾಗುವ ಕೆಲ ಯೋಜನೆಗಳಿಂದಾಗಿ ಸಂಚಾರಿಗಳು ಇನ್ನಷ್ಟು ತೊಂದರೆಗೊಳಗಾಗುತ್ತಿದ್ದಾರೆ. ಆದರೂ ನಿಯಮಗಳನ್ನು ಪಾಲಿಸಬೇಕಾಗಿರುವುದು ಎಲ್ಲ ನಾಗರಿಕರ ಕರ್ತವ್ಯ ಎಂಬ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

English summary
Footpath drivers in Bangalore should be ready to lose their driving licence. Bangalore traffic police has taken a strict stand to recommend cancellation of licence to Regional Transport Officer (RTO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X