• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಡೋಮ್ ಕೊಳ್ಳುವುದರಲ್ಲಿ ಬೆಂಗಳೂರಿಗರೇ ಕಿಂಗ್!

By Prasad
|

ಬೆಂಗಳೂರು, ನ. 21 : ಭಾರತದಂಥ ದೇಶದಲ್ಲಿ ಕಾಂಡೋಮ್ ಮಾರುವುದು ಬಲು ಕಷ್ಟದ ಕೆಲಸ. ಕೊಳ್ಳುವುದು ಇನ್ನೂ ಕಷ್ಟದ ಕೆಲಸ. ಆದರೆ, ದೇಶದ ಯುವಜನತೆ ಮಡಿವಂತಿಕೆಯ ಗೂಡಿನಿಂದ ಹೊರಬರುತ್ತಿದ್ದು, ಯಾವುದೇ ಮುಲಾಜು ಇಲ್ಲದೆ ಕಾಂಡೋಮ್ ಗಳನ್ನು ಆನ್ ಲೈನ್ ಮುಖಾಂತರ ಕೊಳ್ಳುತ್ತಿದ್ದಾರೆ.

ಅದರಲ್ಲೂ, ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಯುವಕರು ಕಾಂಡೋಮ್ ಕೊಳ್ಳುವುದರಲ್ಲಿ ದೇಶಕ್ಕೆ ತಾವೇ ಕಿಂಗ್ ಎಂದು ತೋರಿಸಿದ್ದಾರೆ. ಬೆಂಗಳೂರಿನ ಕೋರಮಂಗಲ, ಬನ್ನೇರುಘಟ್ಟ ರಸ್ತೆ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ ಪ್ರದೇಶಗಳಿಂದ ಕಾಂಡೋಮ್ ಗಾಗಿ ಹೆಚ್ಚೆಚ್ಚು ಆರ್ಡರ್‌ಗಳು ಬರುತ್ತಿವೆ.

ಇದನ್ನು ಹೇಳಿದ್ದು condomking.in ಎಂಬ ವೆಬ್‌ಸೈಟಿನ ಸಿಇಓ ಆಗಿರುವ ರಮೇಶ್ ಶ್ರೀನಿವಾಸ್ ಎಂಬುವವರು. ಅವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಕಾಂಡೋಮ್ ವ್ಯಾಪಾರ ವಹಿವಾಟು ಮತ್ತು ಟ್ರೆಂಡ್ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಕೊಳ್ಳುವುದು ಆನ್‌ಲೈನ್ ಆಗಿರುವುದರಿಂದ ಜನರು ನಿರ್ಭಿಡೆಯಿಂದ ಕೊಳ್ಳುವ ಉತ್ಸಾಹ ತೋರುತ್ತಿದ್ದಾರೆ. ಆರಂಭದಲ್ಲಿ ವಾರಕ್ಕೆ ಒಂದು ಕಾಂಡೋಮ್ ಮಾರಾಟವಾಗುತ್ತಿದ್ದರೆ, ಈಗ ದಿನಕ್ಕೆ 10ರಿಂದ 15 ಬೇಡಿಕೆಗಳು ಬರುತ್ತಿವೆ. ಗಂಡಸರು ಮಾತ್ರವಲ್ಲ ಹೆಂಗಸರು ಕೂಡ ಫಿಮೇಲ್ ಕಾಂಡೋಮ್ ಕೊಳ್ಳುತ್ತಿದ್ದಾರೆ ಅಂತಾರೆ ಶ್ರೀನಿವಾಸ್.

ಯುರೋಪ್‌ನ ನಂ.1 ಕಾಂಡೋಮ್ ಲವ್ ಲೈಟ್ಸ್‌ಗೆ ಹೆಚ್ಚಿನ ಬೇಡಿಕೆಯಿದೆ. ಭಾರತೀಯ ಬ್ರಾಂಡ್‌ಗಳಾಂದ ಕಾಮಸೂತ್ರ ಮತ್ತು ಮೂಡ್ಸ್‌ಗೂ ಸಾಕಷ್ಟು ಬೇಡಿಕೆಯಿದೆ. ಇವು ಚಿಕ್ಕವು. ದೊಡ್ಡ ಕಾಂಡೋಮ್‌ಗಾಗಿ ಬೇಡಿಕೆ ಬಂದರೆ ಯುರೋಪ್‌ನಿಂದಲೇ ತರಿಸಬೇಕಾಗುತ್ತದೆ ಎನ್ನುತ್ತಾರೆ ರಮೇಶ್ ಶ್ರೀನಿವಾಸ್.

English summary
Bangaloreans top the chart in buying condoms online. According to condomking.in website CEO Ramesh Srinivas, buyers are mainly from IT professionals, especially from Koramangala, Bannerughatta of Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X