ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲಾಗಿನಲ್ಲಿ ತನ್ನದೇ ನಗ್ನ ಚಿತ್ರ ಹಾಕಿ ಯುವತಿಯ ಪ್ರತಿಭಟನೆ

By Srinath
|
Google Oneindia Kannada News

blogger-pictures-nude-against-limits-on-free-expression
ಲಂಡನ್, ನ. 20: ಇಂದಿಗೂ ಕಾಲಿನಿಂದ ತಲೆಯವರೆಗೆ ಬಟ್ಟೆ ಧರಿಸಿ ಮಾನ ಮುಚ್ಚಿಕೊಳ್ಳಲು ಇಚ್ಛಿಸುವ ಈಜಿಪ್ಟಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ 20 ವರ್ಷದ ಯುವತಿಯೊಬ್ಬಳು ಮೈಚಳಿ ಬಿಟ್ಟು ತನ್ನದೇ ಬ್ಲಾಗಿನಲ್ಲಿ ತನ್ನದೇ ನಗ್ನ ಚಿತ್ರಗಳ ಜತೆಗೆ ಇನ್ನೂ ಒಂದಷ್ಟು ನಗ್ನ ಚಿತ್ರಗಳನ್ನು ತುರುಕಿ ವಿವಾದದ ಕಿಡಿಹೊತ್ತಿಸಿದ್ದಾಳೆ.

ಈಜಿಪ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೆಂಬುದು ಇವಳ ಅಳಲು. ಅದಕ್ಕಾಗಿ ಈ ದಾರಿ ಕಂಡುಕೊಂಡಿದ್ದಾಳೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೆ ಸಾಮಾಜಿಕ ತಾಣವೊಂದರಲ್ಲಿ ನಗ್ನ ಚಿತ್ರಗಳನ್ನು ಹಾಕಿ ಪ್ರತಿಭಟಿಸುವುದೇ ಎಂದು ಈಜಿಪ್ಟಿನ ಎಲ್ಲ ವರ್ಗದ ಜನ ಈ ಯುವತಿಯ ವಿರುದ್ಧ ಎದ್ದುಕೂತಿದ್ದಾರೆ.

ಅಲಿಯಾ ಮಾಗ್ಡಾ ಎಲ್ಮಾಡಿ ಹೆಸರಿನ ಈ ಯುವತಿ ಮೊನ್ನೆ ಇಂತಹ ಕುಚೇಷ್ಟೆ ಮಾಡಿ. ಸಂಪ್ರದಾಯವಾದಿಗಳು, ವಿಚಾರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
'ನಾಡಿನಲ್ಲಿ ವಿಜೃಂಭಿಸುತ್ತಿರುವ ಹಿಂಸಾಚಾರ, ಮತಿಹೀನ ಜನಾಂಗೀಯ ವ್ಯವಸ್ಥೆ, ಕಾಮ, ಲೈಂಗಿಕ ಕಿರುಕುಳ ಮತ್ತು ಆಷಾಢಭೂತಿತನದ' ವಿರುದ್ಧ ಪ್ರತಿಭಟನಾರ್ಥವಾಗಿ ತನ್ನ ಸಂಪೂರ್ಣ ನಗ್ನ ಫೋಟೋಗಳನ್ನು ಪ್ರಕಟಿಸುತ್ತಿರುವುದಾಗಿ ಯುವತಿ ಬ್ಲಾಗಿನಲ್ಲಿ ಘೋಷಿಸಿದ್ದಾಳೆ.

'ಅಭಿವ್ಯಕ್ತಿ ಸ್ವಾತಂತ್ರ್ಯ ಗಳಿಸುವುದು ಮಹಿಳೆಯರಿಗೆ ಇಷ್ಟೊಂದು ದುಬಾರಿಯೇ' ಎಂದೂ ಒಬ್ಬ ಬೆಂಬಲ ಸೂಚಿಸಿದ್ದಾನೆ.

English summary
An Egyptian woman activist posted her nude pictures to protest limits on free expression and needless to say, it has invited the agony of both, conservatives and liberals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X