ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಮತ್ತೆ ಡಬ್ಬಲ್ ಡೆಕ್ಕರ್ ಬಸ್ ಸಂಚಾರ

By Mahesh
|
Google Oneindia Kannada News

Double Decker Bus
ಬೆಂಗಳೂರು, ನ.19: ದಶಕದ ಹಿಂದೆ ಬೆಂಗಳೂರಿನ ವಿವಿಧೆಡೆ ಸಂಚರಿಸುತ್ತಿದ್ದ ಡಬ್ಬಲ್ ಡೆಕ್ಕರ್ ಬಸ್ ಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಆಮೇಲೆ ಹೊಸ ಬಸ್ ಗಳು ಬಂದ ಮೇಲೆ ಡಬ್ಬಲ್ ಡೆಕ್ಕರ್ ಮೂಲೆಗುಂಪಾಗಿಬಿಟ್ಟಿತು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಈಗ ಮತ್ತೆ ನಗರ ಸಾರಿಗೆಗೆ ಡಬ್ಬಲ್ ಡೆಕ್ಕರ್ ಬಸ್ ಸೇರಿಸುವ ಚಿಂತನೆ ನಡೆಸಿದೆ. 2012ರ ವೇಳೆಗೆ ನಗರದಲ್ಲಿ ಮತ್ತೊಮ್ಮೆ ಡಬ್ಬಲ್ ಡೆಕ್ಕರ್ ಬಸ್ ಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುವ ಸಾಧ್ಯತೆಯಿದೆ.

ಡಬ್ಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಯಾವ ಯಾವ ಪ್ರದೇಶ ಯೋಗ್ಯವಾಗಿದೆ? ಎಲ್ಲಿ ರಸ್ತೆ ಗುಂಡಿಗಳಿಲ್ಲ. ಎಲ್ಲಿ ವಿದ್ಯುತ್ ಕೇಬಲ್ ಗಳು ಜೋತು ಬಿದ್ದಿಲ್ಲ. ಮರಗಳು ಅಡ್ಡ ಬರುವುದಿಲ್ಲ ಎಂದು ಸಮೀಕ್ಷೆ ಕಾರ್ಯದಲ್ಲಿ ಬಿಎಂಟಿಸಿ ತೊಡಗಿದೆ.

ಬಿಎಂಟಿಸಿಗೆ ಡಬ್ಬಲ್ ಡೆಕ್ಕರ್ ಬಸ್ ನೀಡಲು ವೋಲ್ವೋ ಸಂಸ್ಥೆ ಸಿದ್ಧವಾಗಿದೆ ಎಂಬ ಸುದ್ದಿ ಸಿಕ್ಕಿದೆ. 2012ರ ಆಟೋ ಪ್ರದರ್ಶನ ಮೇಳದಲ್ಲಿ ಡಬ್ಬಲ್ ಡೆಕ್ಕರ್ ಬಸ್ ಗಳ ಹೊಸ ಮಾದರಿಯನ್ನು ಪ್ರದರ್ಶಿಸಲಾಗುವುದು. ಅಂತಾರಾಜ್ಯ ಹಾಗೂ ನಗರ ಸಾರಿಗೆಗೆ ಈ ವಾಹನಗಳನ್ನು ಬಳಸಬಹುದಾಗಿದೆ ಎಂದು ವೋಲ್ವೋ ಇಂಡಿಯಾ ಹೇಳಿದೆ.

ಅದರೆ, ಈ ಬಗ್ಗೆ ಬಿಎಂಟಿಸಿ ಸ್ಪಷ್ಟನೆ ನೀಡದಿದರೂ ಡಬ್ಬಲ್ ಡೆಕ್ಕರ್ ಬಸ್ ಸಂಚಾರದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದೆ. ಬೆಂಗಳೂರಿನ ರಸ್ತೆಗಳು ಆದಷ್ಟು ಬೇಗ ರಿಪೇರಿಯಾದರೆ ಸಾರ್ವಜನಿಕರು ಡಬ್ಬಲ್ ಡೆಕ್ಕರ್ ಸವಾರಿ ಮಾಡಬಹುದು.

English summary
The Bangalore Metropolitan Transport Corporation (BMTC) is planning to unveil the double decker buses in Bangalore road as early as 2012. Meanwhile, BMTC is examining feasibility report to find out whether the present roads and infrastructure of Bangalore are conductive for double-deckers, which had disappeared from the city roads many years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X