ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮುಲು ಜೊತೆ ಇಲ್ಲದ ಕರುಣಾಕರ ರೆಡ್ಡಿ ಎಲ್ಲಿ?

|
Google Oneindia Kannada News

Karunakara Reddy
ಬಳ್ಳಾರಿ ಉಪಚುನಾವಣೆಯ ಕಾವು ದಿನ ಹೋದಂತೆ ರಂಗೇರ ತೊಡಗಿದೆ. ನವೆಂಬರ್ 22 ರಿಂದ ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಆಖಾಡಕ್ಕೆ ಇಳಿಯಲಿದ್ದಾರೆ. ಈ ಮಧ್ಯೆ ಎಲ್ಲರಲ್ಲೂ ಕಾಡುವ ಒಂದೇ ಒಂದು ಪ್ರಶ್ತ್ನೆ ಏನಂದರೆ ಕರುಣಾಕರ ರೆಡ್ಡಿ ಎಲ್ಲಿ? ಚುನಾವಣಾ ಪ್ರಚಾರದಲ್ಲಿ ಯಾಕೆ ತಮ್ಮನ್ನು ತೊಡಗಿಸಿಕೊಂಡಿಲ್ಲ? ರಾಮುಲು ಜೊತೆ ಭಿನ್ನಾಭಿಪ್ರಾಯವೇ?

ಸೌಮ್ಯ ಮತ್ತು ಮೃದು ಧೋರಣೆಯ ಕರುಣಾಕರ ರೆಡ್ಡಿ ಹಿಂದಿನಿದಲೂ ತನ್ನ ಸಹೋದರ ಜನಾರ್ಧನ ರೆಡ್ಡಿ ಹಿಂದೇನೆ ಹೋಗುತ್ತಿದ್ದರೆ ಹೊರತು ಮುಂದೆ ಹೋಗುತ್ತಿರಲಿಲ್ಲ. ಜನಾರ್ಧನ ರೆಡ್ಡಿ ಜೈಲು ಸೇರಿದ ನಂತರ ಮಾಧ್ಯಮಗಳ ಕಣ್ಣಿಗೂ ಸಿಗದೇ ಅವರ ನಡೆ ನಾನಾ ಊಹಾಪೋಹಗಳಿಗೆ ಆಹಾರವಾಗುತ್ತಿದೆ.

ಅತ್ತ ಬಿಜೆಪಿ ಪರವಾಗಿ ಪ್ರತ್ಯಕ್ಷವಾಗದೇ ಇತ್ತ ಶ್ರೀರಾಮುಲು ಜೊತೆ ಬೆರೆಯದೆ ಸಹೋದರನಿಲ್ಲದ ಈ ಸಮಯದಲ್ಲಿ ಯಾವ ನಿರ್ಧಾರ ತೆಗೆದು ಕೊಳ್ಳಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆನ್ನಲಾಗಿದೆ. ಕೆಲವು ದಿನಗಳ ಹಿಂದೆ ಕರುಣಾಕರ ರೆಡ್ಡಿ ಧಾರ್ಮಿಕ ಕೆಲಸ ಸಂಬಂಧ ಬಳ್ಳಾರಿಯಿಂದ ಹೊರಗಿದ್ದಾರೆ, ಚುನಾವಾಣ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆಂದು ಹೇಳಿಕೆ ನೀಡಿದ್ದ ಶ್ರೀರಾಮಲು ಪ್ಲೇಟ್ ಬದಲಾಯಿಸಿ ಯಾರೂ ಬರದಿದ್ದರೂ ನಾನು ಚಿಂತಿಸುವುದಿಲ್ಲ ನನಗೆ ಜನಾರ್ಧನ ರೆಡ್ಡಿ ಬೆಂಬಲವಿದೆ ಎಂದು ಹೇಳಿಕೆ ನೀಡಿದ್ದು ಅವರಿಬ್ಬರ ಮಧ್ಯೆ ಏನೋ ಸರಿಯಿಲ್ಲ ಎನ್ನುವ ವಾಸನೆ ಬರಲಾರಂಬಿಸಿದೆ.

ಶ್ರೀರಾಮುಲು ಬಿಜೆಪಿ ತೊರೆದಿದ್ದು ಕರುಣಾಕರ ರೆಡ್ಡಿಗೆ ಬೇಸರ ತಂದಿದೆ ಎನ್ನುತ್ತದೆ ಕೆಲವು ಮೂಲಗಳು. ಪಕ್ಷದ ಮತ್ತು ಪಕ್ಷದ ನಾಯಕರ ವಿರುದ್ದ ಅವರು ನೀಡುತ್ತಿರುವ ಹೇಳಿಕೆಗಳು ಕರುಣಾಗೆ ಚಿಂತೆ ಉಂಟು ಮಾಡಿದ್ದು, ಸಹೋದರ ಜೈಲಿನಿಂದ ವಾಪಾಸ್ ಬರುವ ತನಕ ರಾಜಕೀಯದ ಸಹವಾಸವೇ ಬೇಡ ಎಂದು ಆಂಧ್ರದ ಕಡಪ ಬಳಿಯಿರುವ ಬ್ರಹ್ಮವಾರಿ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆಂದು ಎಂದು ಕೂಡಾ ಹೇಳಲಾಗುತ್ತಿದೆ.

ಚುನಾವಣಾ ಪ್ರಚಾರಕ್ಕೆ ಬಂದು ನನ್ನನ್ನು ಆಶೀರ್ವದಿಸಿ ಎಂದು ರಾಮುಲು ಕೇಳಿಕೊಂಡರೂ ಕರುಣಾಕರ ರೆಡ್ಡಿ ಕಡೆಯಿಂದ Yes Or No ಸೂಕ್ತವಾದ ಉತ್ತರ ಬರುತ್ತಿಲ್ಲ ಎನ್ನಲಾಗಿದೆ. ಈ ಎಲ್ಲಾ ಪ್ರಶ್ತ್ನೆಗಳಿಗೆ ಕರುಣಾಕರ ರೆಡ್ಡಿ ಮಾತ್ರ ಉತ್ತರಿಸಬಲ್ಲರು.

English summary
Ex-minister and brother of Janardhana reddy, Karunakara Reddy is caught in a tricky situation. To support independent candidate Sriramulu or support the official BJP candidate Gadi Lingappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X