ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಸ್ ವಿರುದ್ಧ ಸಿಬಿಐಗೆ ಆಗ್ರಹಿಸಿ ಗೌಡರಿಂದ ಸತ್ಯಾಗ್ರಹ

By Mahesh
|
Google Oneindia Kannada News

HD Deve Gowda
ಬೆಂಗಳೂರು, ನ.19: ಬಿಎಂಐಸಿ ನೈಸ್ ವಿರುದ್ಧದ ಹೋರಾಟಗಾರ ಸಿದ್ಧಲಿಂಗಪ್ರಭು ಹತ್ಯೆ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಆಗ್ರಹಿಸಿದ್ದಾರೆ.

ನೈಸ್ ಕಂಪನಿ ಕಿರುಕುಳಕ್ಕೆ ಬೇಸತ್ತು ಪತಿಯನ್ನು ಕಳೆದುಕೊಂಡಿರುವ ಸಿದ್ದಲಿಂಗಪ್ರಭು ಪತ್ನಿ ಮಮತಾ ಆತ್ಮಹತ್ಯೆಗೆ ಯತ್ನಿಸಿದ್ದರು. ಶುಕ್ರವಾರ ಮಮತಾರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದ ದೇವೇಗೌಡರು ಕಣ್ಣೀರಿಟ್ಟರು.

ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಭು ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಉದ್ಯಮಿ ಅಶೋಕ್ ಖೇಣಿ ತಾಳಕ್ಕೆ ಕುಣಿಯುವುದನ್ನು ಸರ್ಕಾರ ಬಿಟ್ಟರೆ ಒಳ್ಳೆಯದು. ನನಗೆ ಸರ್ಕಾರ ಹಾಗೂ ಪೊಲೀಸರ ಮೇಲೆ ನಂಬಿಕೆ ಹೊರಟು ಹೋಗಿದೆ.

ನ.22ರಂದು ಬೆಂಗಳೂರಿನ ಎಂಜಿ ರಸ್ತೆ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬೆಳಗ್ಗೆ 7 ಗಂಟೆಯಿಂದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ದೇವೇಗೌಡರು ಹೇಳಿದರು. ರೈತ ಸಂಘಟನೆ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಪ್ರಗತಿಪರ ಸಂಘಟನೆಗಳ ನಾಯಕ ಅಗ್ನಿಶ್ರೀಧರ್ ಮುಂತಾದವರು ದೇವೇಗೌಡರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

English summary
Former Prime Minister HD Devegowda demanded CBI probe in BMIC NICE scam. Devegowda is accusing NICE for killing farmer Siddalinga Swamy and suicide attempt by his wife Mamta. HD Devegowda to go on hunger strike from Nov.22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X