ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೈರಪ್ಪನವರಿಗೆ ಜ್ಞಾನಪೀಠಕ್ಕೆ ಸಮಾನಾಂತರ ಸಮ್ಮಾನ

By Mahesh
|
Google Oneindia Kannada News

SL Bhyrappa
ನವದೆಹಲಿ, ನ.17: ಕನ್ನಡದ ಜನಪ್ರಿಯ ಕಾದಂಬರಿಕಾರ ಡಾ. ಎಸ್‌.ಎಲ್‌.ಭೈರಪ್ಪ ಅವರಿಗೆ 2010ನೇ ಸಾಲಿನ 'ಸರಸ್ವತಿ ಸಮ್ಮಾನ್‌' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಪ್ರಥಮ ಬಾರಿಗೆ 'ಸರಸ್ವತಿ ಸಮ್ಮಾನ್' ಪ್ರಶಸ್ತಿ ದೊರೆಕಿಸಿಕೊಟ್ಟ ಕೀರ್ತಿ ಈ ಮೇರು ಲೇಖಕರಿಗೆ ಸಲ್ಲುತ್ತದೆ.

ಭೈರಪ್ಪ ಅವರು 2002ರಲ್ಲಿ ಬರೆದ 'ಮಂದ್ರ' ಕಾದಂಬರಿಯನ್ನು ಸುಪ್ರೀಂಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಜಿಬಿ ಪಟ್ನಾಯಕ್ ನೇತೃತ್ವದ ಸಮಿತಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಿ ಕೆಕೆ ಬಿರ್ಲಾ ಫೌಂಡೇಶನ್‌ ಗೆ ಶಿಫಾರಸ್ಸು ಮಾಡಲಾಗಿತ್ತು.

ರಾಜ್ಯಸಭೆ ಸದಸ್ಯ ಕರಣ್‌ ಸಿಂಗ್‌ ಮತ್ತು ಕೆ.ಕೆ.ಬಿರ್ಲಾ ಪ್ರತಿಷ್ಠಾನದ ಅಧ್ಯಕ್ಷೆ ಶೋಭನಾ ಭಾರ್ತಿಯಾ ಅವರು ಭೈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಸರಸ್ವತಿ ಸಮ್ಮಾನ್ ಪ್ರಶಸ್ತಿ: ಈ ಪ್ರಶಸ್ತಿಯು 7.5 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. 25 ಭಾರತೀಯ ಭಾಷೆಗಳಲ್ಲಿ, ಕಳೆದ 10 ವರ್ಷಗಳಲ್ಲಿ ರಚಿತಗೊಂಡ ಕಾದಂಬರಿಗಳ ನಡುವೆ ಸ್ಪರ್ಧೆಯಿತ್ತು. ಅಂತಿಮವಾಗಿ 'ಮಂದ್ರ' ಕಾದಂಬರಿಯನ್ನು ಶ್ರೇಷ್ಠ ಕೃತಿಯಾಗಿ ಆರಿಸಲಾಗಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿರುವ ಕಾದಂಬರಿಕಾರ ಎಂಬ ಖ್ಯಾತಿಯನ್ನು ಭೈರಪ್ಪ ಅವರು ಹೊಂದಿದ್ದಾರೆ. ಒಟ್ಟು 22 ಕಾದಂಬರಿ ರಚಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ 'ಕವಲು' ಕಾದಂಬರಿ 18 ಬಾರಿ ಮುದ್ರಣಗೊಂಡು ದಾಖಲೆ ಬರೆದಿದೆ.

ಸರಸ್ವತಿ ಸಮ್ಮಾನ ಪಡೆದ ಭೈರಪ್ಪ ಹೊರಳಿದ್ದು ಸಂತೇಶಿವರದ ಕಡೆಗೆ....

English summary
Eminent Kannada author SL Bhyrappa was on Wednesday honoured with the Saraswati Samman in literature for his epic novel 'Mandra'. The Saraswati Samman is given away by the KK Birla Foundation. Bhyrappa, 77, a veteran of 22 novels, many of which have been translated and have been best-sellers, had published 'Mandra' or 'the lower musical note' in 2002.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X