ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇನ್ಫೋಸಿಸ್ ಪ್ರೈಜ್ 2011' ಪ್ರಶಸ್ತಿ ಪ್ರಕಟ

By Prasad
|
Google Oneindia Kannada News

Infosys Prize 2011 awards announced
ಬೆಂಗಳೂರು, ನ. 17 : ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಗೈದು 'ಇನ್ಫೋಸಿಸ್ ಪ್ರೈಜ್ 2011' ಪ್ರಶಸ್ತಿ ಪಡೆದ 6 ಸಂಶೋಧಕರ ಹೆಸರುಗಳನ್ನು ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ ನ.16, ಬುಧವಾರ ಪ್ರಕಟಿಸಿದೆ.

ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಭಾನ, ಜೀವ ವಿಜ್ಞಾನ, ಗಣಿತ ವಿಜ್ಞಾನ, ಭೌತ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿ ಈ ಆರು ಜನ ಸಲ್ಲಿಸಿರುವ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ 22-ಕ್ಯಾರಟ್ ಬಂಗಾರದ ಪದಕ, ಪ್ರಶಸ್ತಿಪತ್ರ ಮತ್ತು 50 ಲಕ್ಷ ರು. ನಗದು ಒಳಗೊಂಡಿರುತ್ತದೆ.

ಪ್ರಶಸ್ತಿ ಪಾತ್ರರು :
ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ : ಪ್ರೊ. ಕಲ್ಯಾಣಮಯ್ ದೇಬ್, ಕಾನ್ಪುರ.
ಜೀವ ವಿಜ್ಞಾನ : ಡಾ. ಇಮ್ರಾನ್ ಸಿದ್ದಿಕಿ, ಹೈದರಾಬಾದ್.
ಗಣಿತ ವಿಜ್ಞಾನ : ಪ್ರೊ. ಕಣ್ಣನ್ ಸೌಂದರ್‌ರಾಜನ್, ಪಾಲೊ ಅಲ್ಟೋ, ಅಮೆರಿಕ.
ಭೌತ ವಿಜ್ಞಾನ : ಪ್ರೊ. ಶ್ರೀರಾಮ್ ರಾಮಸ್ವಾಮಿ, ಬೆಂಗಳೂರು.
ಸಮಾಜ ವಿಜ್ಞಾನ - ಅರ್ಥಶಾಸ್ತ್ರ : ಪ್ರೊ. ರಘುರಾಮ್ ಜಿ. ರಾಜನ್, ಶಿಕಾಗೋ, ಅಮೆರಿಕ.
ಸಮಾಜ ವಿಜ್ಞಾನ - ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧ : ಡಾ. ಪ್ರತಾಪ್ ಭಾನು ಮೆಹ್ತಾ, ನವದೆಹಲಿ.

2012ರ ಜನೆವರಿ 9ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

English summary
Infosys Science Foundation Announces Infosys Prize 2011 Winners. 6 winners have been selected from 5 categories of scientific research - Engineering and Computer Science, Life Sciences, Mathematical Sciences, Physical Sciences and Social Sciences. The award ceremony will be held in Bangalore on January 9, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X