ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು

By Mahesh
|
Google Oneindia Kannada News

BS Yeddyurappa
ಬೆಂಗಳೂರು, ನ.16: ಡಿನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಖಾಸಗಿ ದೂರಿನ ಪ್ರಮುಖ ಆರೋಪಿ ಬಿಎಸ್ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿವಿ ಪಿಂಟೋ ಅವರಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ ತೀರ್ಪನ್ನು ಬುಧವಾರ(ನ.16)ಕ್ಕೆ ಕಾಯ್ದಿರಿಸಿತ್ತು.

ಬಾಷಾ ಸಲ್ಲಿಸಿದ್ದ 1,4 ಹಾಗೂ 5 ನೇ ದೂರಿಗೆ ಸಂಬಂಧಿಸಿದಂತೆ ಮಂಗಳವಾರ ಬಹುತೇಕ ವಿಚಾರಣೆ ಮುಗಿದಿತ್ತು. ಆದರೆ, ಕೋರ್ಟ್ ಸಮಯ ಮುಗಿದಿದ್ದರಿಂದ ಬುಧವಾರ ತೀರ್ಪು ಪ್ರಕಟಿಸುವುದಾಗಿ ನ್ಯಾ. ಪಿಂಟೋ ಪ್ರಕಟಿಸಿದ್ದರು.

3 ಹಾಗೂ 4 ನೇ ದೂರಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಪ್ರಸ್ತುತ ನಿರೀಕ್ಷಣಾ ಜಾಮೀನಿನ ಬಗ್ಗೆ ಸಿರಾಜಿನ್ ಬಾಷಾ ವಕೀಲರು ಆಕ್ಷೇಪಣೆ ಸಲ್ಲಿಸದ ಕಾರಣ, ಯಡಿಯೂರಪ್ಪ ಅವರಿಗೆ ಜಾಮೀನು ಸುಲಭವಾಗಿ ಮಂಜೂರಾಗಿದೆ.

ಆದರೆ, ಸಾಕ್ಷ್ಯ ನಾಶಪಡಿಸದಂತೆ ಯಡಿಯೂರಪ್ಪ ಅವರಿಗೆ ನ್ಯಾ. ಪಿಂಟೋ ಎಚ್ಚರಿಸಿದ್ದಾರೆ. 2 ಲಕ್ಷ ರೂ ಮೊತ್ತದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕು. ವಿದೇಶಕ್ಕೆ ಹಾರುವಂತಿಲ್ಲ. ಪ್ರತಿ ವಿಚಾರಣೆ ವೇಳೆ ಕೋರ್ಟ್ ಗೆ ಹಾಜರಾಗಬೇಕು ಎಂದು ನ್ಯಾ. ಪಿಂಟೋ ಸೂಚಿಸಿದ್ದಾರೆ.

English summary
Karnataka high court Justice Pinto has granted anticipatory bail to former CM BS Yeddyurappa today(Nov.16). Earlier Justice Pinto passed the order on Sirajin Pasha's 1,4 and 5th complaint related to denotification case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X