ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ 2 ಲಕ್ಷ ಫೇಸ್‌ಬುಕ್ ಬಳಕೆದಾರರ ಖಾತೆಗೆ ಕನ್ನ

By Prasad
|
Google Oneindia Kannada News

Facebook users account hacked
ಬೆಂಗಳೂರು, ನ. 16 : ಕಳೆದ 24 ಗಂಟೆಗಳಲ್ಲಿ ಫೇಸ್ ಬುಕ್ ಖಾತೆಗೆ ಕನ್ನ ಹಾಕಿ ಅಶ್ಲೀಲ ಮತ್ತು ಆಕ್ಷೇಪಾರ್ಹ ಚಿತ್ರಗಳನ್ನು ಅಪ್ಲೋಡ್ ಮಾಡಿರುವುದು ಫೇಸ್ ಬುಕ್ ಬಳಕೆದಾರರಲ್ಲಿ ಆತಂಕ ಮತ್ತು ಅಸಹ್ಯ ಹುಟ್ಟಿಸಿದೆ. ಈ ಫೇಸ್ ಬುಕ್ ಬಳಕೆದಾರರಲ್ಲಿ ಸುಮಾರು 2 ಲಕ್ಷ ಜನರು ಬೆಂಗಳೂರಿನವರು ಎನ್ನುವುದು ವಿಶೇಷ.

ಸೈಬರ್ ಕ್ರೈಂ ಇಲಾಖೆಗೆ ಅನೇಕ ಹೆಚ್ಚು ದೂರುಗಳು ಬಂದಿವೆ. ಈ ಅಸಹ್ಯಕರ ಬೆಳವಣಿಗೆಯಿಂದ ಬೇಸತ್ತು ಫೇಸ್ ಬುಕ್ ತೊರೆಯುತ್ತಿರುವುದಾಗಿ 50ಕ್ಕೂ ಹೆಚ್ಚು ನೆಟ್ಟಿಗರು ಸಂದೇಶ ಹಾಕಿದ್ದಾರೆ. ಇದರಿಂದಾಗಿ ನಾವು ಮತ್ತು ನಮ್ಮ ಕುಟುಂಬದವರು ಸಾಕಷ್ಟು ಮುಜುಗರ ಅನುಭವಿಸಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಹ್ಯಾಕ್ ಮಾಡಿ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಅಪರಾಧಿಗಳನ್ನು ಪತ್ತೆ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಫೇಸ್ ಬುಕ್ ಹೇಳಿಕೆ ನೀಡಿದೆ. ಕೂಡಲೆ ಕಾರ್ಯತತ್ಪರರಾಗಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿರುವುದಾಗಿ ಫೇಸ್ ಬುಕ್ ವಕ್ತಾರ ಆಂಡ್ರ್ಯೂ ನಾಯ್ಸ್ ಅವರು ರಾಯಟರ್ಸ್‌ಗೆ ತಿಳಿಸಿದ್ದಾರೆ.

ಇದೀಗ ಬಂದ ಸುದ್ದಿ : Facebook said it has rid its site of most of the pornographic and violent images posted as part of a spam attack.
The social network blamed a browser vulnerability and said it was improving its systems to defend itself against similar attacks in the future. Thousands of the website's 800 million users have complained about the pictures over recent days. ( Source : BBC News Technology)

English summary
More than 2 lakh Facebook users accounts from Bangalore have been hacked and pornographic and violent pictures were uploaded embarrassing the users and their families. Facebook Inc has said that it has identified the culprits and will take suitable legal action against them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X