ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯರ ಎಣ್ಣೆ ಕಂಪನಿ ಬೆಲೆಯೇ 22,850 ಕೋಟಿ ರೂ. ಅಂತೆ!

By Mahesh
|
Google Oneindia Kannada News

VIjay Mallya assets
ಬೆಂಗಳೂರು, ನ.16: ಕೊಂಕಣಿ ಸಮುದಾಯಕ್ಕೆ ಸೇರಿದ ವಿಜಯ್ ಮಲ್ಯರ ಖಾಸಗಿ ಆಸ್ತಿ ಮೊತ್ತ 1.4 ಬಿಲಿಯನ್ ಡಾಲರ್ ಎಂದು ಫೋರ್ಬ್ಸ್ ವರದಿ ಹೇಳುತ್ತದೆ. ಕಿಂಗ್ ಆಫ್ ಗುಡ್ ಟೈಮ್ಸ್ ಎಂದೇ ಕರೆಯಲ್ಪಡುವ ಮಲ್ಯ ಮದ್ಯದ ದೊರೆಯಾಗಿ ಈಗಲೂ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿ ಕೂತಿದ್ದಾರೆ. ಆದರೂ ಕಿಂಗ್ ಫಿಷರ್ ಏರ್ ಲೈನ್ಸ್ ಕೊಟ್ಟಿರುವ ಹೊಡೆತ ಹಾಗೂ ಈ ನಡೆತ್ತಿರುವ ಸಹಾಯಧನದ ಪ್ರಕರಣ ಬೇರೇ ಏನನ್ನೋ ಸೂಚಿಸುತ್ತಿದೆ.

ವಿಜಯ್ ಮಲ್ಯ 'ಕಿಂಗ್ ಫಿಷರ್ ಏರ್ ಲೈನ್ಸ್ ' ಮುಚ್ಚುತ್ತಾರಂತೆ ಎಂದರೆ ಯಾರೂ ನಂಬುವುದಕ್ಕೆ ಸಿದ್ಧವಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಎಂದರೆ, ಮಲ್ಯರ ಬಳಿ ಇರುವ ಅಗಾಧ ಆಸ್ತಿ. ತಮ್ಮ ಆಸ್ತಿಯ ಯಾವುದಾದರೂ ಒಂದು ತುಂಡು ಮಾರಿದರೆ ಕಿಂಗ್ ಫಿಷರ್ ಮತ್ತೆ ಹಾರಾಟ ಆರಂಭಿಸಬಹುದು.

ಮಲ್ಯಗೆ ಇಂದಿಗೂ ಯುಬಿಗೇ ಆಧಾರ: ಸುಮಾರು 6 ಕಂಪನಿಗಳ ಸಮೂಹ ಹೊಂದಿರುವ ಯುನೈಟೆಡ್ ಬ್ರಿವೆರೆಸ್(UB)ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 22,850 ಕೋಟಿ ರೂ ತೂಗುತ್ತದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೌಲಯ್ 464 ಕೋಟಿ ರೂ. ಇದೆ. ಅಲ್ಲದೆ ಐಪಿಎಲ್ ನಲ್ಲಿ ಆರ್ ಸಿಬಿ ಕಪ್ ಗೆಲ್ಲದಿದ್ದರೂ ಮಲ್ಯ ಬುದ್ಧಿವಂತ. ಆಟಗಾರರು, ಅಂಪೈರ್, ಅಧಿಕಾರಿಗಳಿಗೆ ಕಿಂಗ್ ಫಿಷರ್ ವಿಮಾನ ಕಳಿಸುತ್ತಿದ್ದ. ಡೆಲ್ಲಿ ಡೇರ್ ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ನಲ್ಲೂ ಒಂದಿಷ್ಟು ಷೇರು ಹಾಕಿ ಹಣ ಗಳಿಸಿಕೊಂಡ.

ಎಫ್ 1 ಟೀಮ್ ಅನ್ನು 610.2 ಕೋಟಿ ರು ಕೊಟ್ಟು ಖರೀದಿಸಿದ. 450 ಕೋಟಿ ಮೊತ್ತದ ಐಷಾರಾಮಿ ಬೃಹತ್ ಶಿಪ್(312 ಅಡಿ) ಖರೀದಿಸಿದ. ಕುದುರೆ ಬೆನ್ನಿಗೂ ದುಡ್ದು ಕಟ್ಟುವುದರಲ್ಲಿ ನಿಸ್ಸೀಮನಾಗಿರುವ ಮಲ್ಯ ಸುಮಾರು 200 ರೇಸ್ ಗೆಲ್ಲುವ ಕುದುರೆಗಳನ್ನು ಸಾಕಿಕೊಂಡಿದ್ದಾನೆ.

ಇಷ್ಟೆಲ್ಲ ಇದ್ದರೂ ಕಿಂಗ್ ಫಿಷರ್ ಸಾಲಕ್ಕೆ ಯಾವುದನ್ನು ಕಳೆದುಕೊಳ್ಳಲು ಮಲ್ಯ ತಯಾರಿಲ್ಲ. 2010-11ರಲ್ಲಿ 1,027 ಕೋಟಿ ರೂ ನಷ್ಟ ಅನುಭವಿಸಿದ್ದ ಕಿಂಗ್ ಫಿಷರ್ ಒಟ್ಟಾರೆ 7,057.08 ಕೋಟಿ ಸಾಲ ತಲೆ ಮೇಲೆ ಹೊತ್ತುಕೊಂಡಿದೆ. 21,800 ಕೋಟಿ ರೂ ಸಮೂಹದ ಒಡೆಯನಾದ ಮಲ್ಯ ಆಡುತ್ತಿರುವ ನಾಟಕದ ನಿಜ ಅರ್ಥ ಕೆಲವರಿಗೆ ಮಾತ್ರ ಗೊತ್ತು.

ಅಸಲಿಗೆ ಮಲ್ಯ ಮಾಡಿರುವ ಪ್ಲ್ಯಾನ್ ಆದರೂ ಏನು...?

English summary
King of Good Times Empire of UB Group, billionaire business tycoon Vijay Mallya is not ready to sell his properties to save India's Second largest Airlines Kingfisher. Banks and UPA Government are turned down bailout package. But Mallya confident of solving financial crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X