ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಬಗ್ಗೆ ಸಂಸತ್ತಲ್ಲಿ ಮಾತಾಡುವೆ: ದೇವೇಗೌಡ

By Srinath
|
Google Oneindia Kannada News

relevance-of-lokayukta-discuss-parliament-deve-gowda
ಮೈಸೂರು, ನ.15: ಒಂದೆಡೆ ಮಗ ಕುಮಾರಸ್ವಾಮಿ ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ವಿರುದ್ಧ ಮುರುಕೊಂಡು ಬಿದ್ದಿದ್ದರೆ ಅವರಪ್ಪ ದೊಡ್ಡಗೌಡರು ನ್ಯಾ. ಹೆಗ್ಡೆ ಬಗ್ಗೆ ತಮ್ಮ ಮೃಧು ಧೋರಣೆ ಮುಂದುವರಿಸಿದ್ದಾರೆ. 'ಈಗ ಅರ್ಜೆಂಟೇನು? ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡುವೆ' ಎಂದು ಜೆಡಿಎಸ್‌ ಅಧಿನಾಯಕ ಎಚ್‌.ಡಿ. ದೇವೇಗೌಡ ನಿಗೂಢವಾಗಿ ಹೇಳಿದ್ದಾರೆ.

ಯಾರೋ ಒಬ್ಬರು ದೂರಿದ್ದಾರೆ ಎಂಬ ಕಾರಣಕ್ಕೆ ನಮಗೆ ಲೋಕಾಯುಕ್ತ ಬೇಕೆ? ಬೇಡವೇ? ಎಂದು ಪ್ರಶ್ನಿಸಿದರೆ ಹೇಗಾದೀತು. ಈ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ದೇವೇಗೌಡ ಜಾಣ ನುಡಿಗಳನ್ನಾಡಿದ್ದಾರೆ.

ಸಂಸತ್ತಿನಲ್ಲಿ ಲೋಕಪಾಲ ಮತ್ತು ಜನಲೋಕಪಾಲ ಮಸೂದೆ ಬಗ್ಗೆ ಚರ್ಚೆಯಾಗಲಿದೆ. ಅಲ್ಲಿ ಲೋಕಾಯುಕ್ತ ಸಂಸ್ಥೆಯ ಅಗತ್ಯತೆ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವೆ. ಲೋಕಾಯುಕ್ತದಲ್ಲಿ ಎಸ್‌ಪಿಯಾಗಿದ್ದು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿರುವ ಮಧುಕರ ಶೆಟ್ಟಿ ಅವರು ಲೋಕಾಯುಕ್ತದಲ್ಲಿ ಭ್ರಷ್ಟರು ತುಂಬಿ ತುಳುಕುತ್ತಿದ್ದಾರೆ ಎಂದು ದೂರಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಗೌಡರು ತಿಳಿಸಿದರು.

English summary
I will speak about Lokayukta relavance in Parliament declared former PM HD Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X