ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುರ್ರೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ, ಗುರುವಾರದಿಂದ

By Prasad
|
Google Oneindia Kannada News

Petrol price may be reduced
ನವದೆಹಲಿ, ನ. 15 : ಗುರುವಾರ, ನ. 17ರಂದು ಭಾರತದ ನಾಗರಿಕರಿಗೆ ಒಂದು ಷಾಕ್ ಕಾದಿರುತ್ತದೆ. ಅದು ಹಿತವಾದ ಆಘಾತ. ಏರು ಮುಖ ಕಂಡಿದ್ದ ಪೆಟ್ರೋಲ್ ಬೆಲೆ ಸುಮಾರು 2 ರು.ಯಷ್ಟು ಕಡಿತವಾಗುವ ಸಾಧ್ಯತೆಯಿದೆ. ಕೇಂದ್ರ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆ ಇಳಿಸುವ ನಿರ್ಧಾರಕ್ಕೆ ಬಂದಿವೆ.

ಪೆಟ್ರೋಲ್ ಬೆಲೆಯಲ್ಲಿ ಇಳಿತ ಕಂಡುಬರುತ್ತಿರುವುದು ಜೂನ್ 2010ರ ನಂತರ ಇದು ಮೊದಲನೇ ಬಾರಿ. ನ.3ರಂದು ಪೆಟ್ರೋಲ್ ಬೆಲೆ ರು. 1.80ನಷ್ಟು ಏರಿಕೆಯಾಗಿತ್ತು. ಬೆಂಗಳೂರಿನಲ್ಲಿ ಸದ್ಯದ ಬೆಲೆ ಲೀಟರಿಗೆ ರು.76.79. ಇಡೀ ದೇಶದಲ್ಲಿಯೇ ಅತಿ ದುಬಾರಿ ಬೆಲೆಗೆ ಪೆಟ್ರೋಲ್ ಮಾರಾಟವಾಗುತ್ತಿರುವುದು ಬೆಂಗಳೂರಿನಲ್ಲಿಯೆ.

ತೈಲ ಬೆಲೆ ನಿಗದಿಪಡಿಸಲು ಕೇಂದ್ರ ಸ್ವಾಮ್ಯದ ತೈಲ ಕಂಪನಿಗಳು ಮುಕ್ತಹಸ್ತ ಹೊಂದಿದ್ದರೂ ಅತಿದೊಡ್ಡ ಷೇರುದಾರ ಆಗಿರುವ ಕೇಂದ್ರ ಸರಕಾರದ ಒಪ್ಪಿಗೆಯಿಲ್ಲದೆ ತೈಲ ಬೆಲೆ ಏರಿಸಲು ಸಾಧ್ಯವೇ ಇಲ್ಲ. ಈಗ, ನವೆಂಬರ್ 22ರಿಂದ ಚಳಿಗಾಲದ ಅಧಿವೇಶನ ಶುರುವಾಗುತ್ತಿರುವುದರಿಂದ ಜಾಣತನ ತೋರಿರುವ ಕೇಂದ್ರ ಸರಕಾರ ತೈಲ ಬೆಲೆ ಇಳಿಸಲು ತೈಲ ಕಂಪನಿಗಳಿಗೆ ತಾಕೀತು ಮಾಡಿದೆ.

ಅಲ್ಲದೆ, ಅಂತಾರಾಷ್ಟ್ರೀಯ ತೈಲ ಸಗಟು ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದರಿಂದ ಪೆಟ್ರೋಲ್ ಬೆಲೆ ಇಳಿಸುವುದು ಕಂಪನಿಗಳಿಗೆ ಅನಿವಾರ್ಯವಾಗಿದೆ. ಆದರೆ, ಮಾರುಕಟ್ಟೆ ಪಂಡಿತರ ಪ್ರಕಾರ, ತೈಲ ಬೆಲೆ ಇಳಿಸುವುದು ಮತ್ತೊಂದು ಭಾರೀ ಬೆಲೆ ಏರಿಕೆಗೆ ಹಾಕಿಕೊಂಡಿರುವ ದಾರಿ. ಆದ್ದರಿಂದ, ಅಧಿವೇಶನ ಮುಗಿಯುತ್ತಿದ್ದಂತೆ ಮತ್ತೆ ಪೆಟ್ರೋಲ್ ಬೆಲೆ ಏರಿದರೂ ಆಶ್ಚರ್ಯವಿಲ್ಲ.

English summary
State-run oil companies have decided to reduce petrol price by at least Rs.2 per litre. The central govt, which is the largest stake holder, has pushed the companies to reduce petrol price ahead of winter session starting from Nov 22. Central govt is playing another political game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X