ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ತ್ರೈಮಾಸಿಕದಲ್ಲಿ ಕಿಂಗ್ ಫಿಷರ್ ನಷ್ಟ ದುಪ್ಪಟ್ಟು

By Mahesh
|
Google Oneindia Kannada News

Kingfisher Q2 losses doubles
ಮುಂಬೈ, ನ.15: ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್ ಮಲ್ಯರ ಕಿಂಗ್ ಫಿಷರ್ ಏರ್ ಲೈನ್ಸ್ ಎರಡನೇ ತ್ರೈಮಾಸಿಕದಲ್ಲೂ ಭಾರಿ ನಷ್ಟ ಅನುಭವಿಸಿದೆ. ಮಂಗಳವಾರ Q2 ವರದಿ ಪ್ರಕಟಿಸಿದ ಸಂಸ್ಥೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ನಷ್ಟ ದ್ವಿಗುಣವಾಗಿದೆ ಎಂದು ಹೇಳಿದೆ.

ಕಿಂಗ್ ಫಿಷರ್ ಏರ್ ಲೈನ್ಸ್ ನಷ್ಟಕ್ಕೆ ತೈಲ ಬೆಲೆ ಏರಿಕೆ ಹಾಗೂ ಆಡಳಿತಾತ್ಮಕ ವೆಚ್ಚವೇ ಕಾರಣ ಎನ್ನಲಾಗಿದೆ. ಸೆ.30ಕ್ಕೆ ಕೊನೆಗೊಂಡ ಎರಡನೆ ತ್ರೈಮಾಸಿಕದಲ್ಲಿ ಒಟ್ಟು 469 ಕೋಟು ರು ನಷ್ಟವಾಗಿದೆ. ಕಳೆದ ವರ್ಷ ಕಂಪನಿ ಇದೇ ಅವಧಿಯಲ್ಲಿ 231 ಕೋಟಿ ರು ನಷ್ಟ ಅನುಭವಿಸಿತ್ತು.

ನಿವ್ವಳ ಆದಾಯ ಶೇ.11ರಷ್ಟು ಮಾತ್ರ ಏರಿಕೆಯಾಗಿದ್ದು, 1,530 ಕೋಟಿ ರು ಗಳಿಕೆ ದಾಖಲಿಸಿದೆ. ಕಳೆದ ವರ್ಷ 1,380 ಕೋಟಿ ರು ಮಾತ್ರ ಗಳಿಸಿತ್ತು.

Q2 ತ್ರೈಮಾಸಿಕದಲ್ಲಿ ಇಂಧನ ವೆಚ್ಚ ಶೇ.70ರಷ್ಟು ಹೆಚ್ಚಳ ಕಂಡು 817 ಕೋಟಿ ರು ಅಧಿಕ ಖರ್ಚು ವೆಚ್ಚ ದಾಖಲಾಗಿದೆ. ಇಂಧನ ಬೆಲೆ ಏರಿಕೆ ಜೊತೆ ಆಡವಾಡಿದ ಯುಪಿಎ ಸರ್ಕಾರದ ನೀತಿಗೆ ಏರ್ ಲೈನ್ಸ್ ಬಲಿಯಾಗುವ ಸನ್ನಾಹದಲ್ಲಿದೆ.

ಭಾರತದ ಎರಡನೇ ಅತಿದೊಡ್ಡ ಏರ್ ಲೈನ್ಸ್ ಎನಿಸಿರುವ ಕಿಂಗ್ ಫಿಷರ್ ಈಗ 7,000 ಕೋಟಿ ರು ಸಾಲ ತಲೆ ಮೇಲೆ ಹೊತ್ತು ಕೂತಿದೆ. (ಗುಡ್ ರಿಟರ್ನ್ಸ್)

English summary
Kingfisher Airlines, the company which is in the midst of trouble on Tuesday posted losses in its Q2 financial results. The losses of the company have doubled during the quarter year-on-year (y-oy) on account of higher fuel costs and operating costs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X