ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು ಬರೆದ ಹಾಗೆ ಆಗಲಿ ನನ್ನ ಜೀವನ : ಶ್ರೀರಾಮುಲು

|
Google Oneindia Kannada News

Sriramulu
ಅನಾಥನಾಗಿದ್ದ ನನ್ನನ್ನು ಈ ಮಟ್ಟದಲ್ಲಿ ತಂದವರು ಜನಾರ್ದನ ರೆಡ್ಡಿಯವರು. ಸುಷ್ಮಾ ಸ್ವರಾಜ್ ಬಳ್ಳಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ನಾವು ಸುಷ್ಮಾ ಅವರ ಜೊತೆ ಆತ್ಮೀಯವಾಗಿ ಬೆರೆತೆವು. ಎಷ್ಟೋ ಬಾರಿ ಅವರು ನನ್ನನ್ನು ಸಾಕುಮಗ ಎಂದು ಸಂಬೋಧಿಸುತ್ತಿದ್ದರು. ಸುಷ್ಮಾ ಸ್ವರಾಜ್ ಅವರನ್ನು ನಾನು ತಾಯಿ ಸ್ಥಾನದಲ್ಲಿ ಕಂಡಿದ್ದೇನೆ, ನಾನು ಈಗಲೂ ಅವರನ್ನು ಅಮ್ಮಾ ಎಂದೇ ಕೂಗುವುದು ಎನ್ನುವುದು ಶ್ರೀರಾಮುಲು ಅವರ ಮಾತುಗಳು.

ನಾನು ಜೀವನದಲ್ಲಿ ಜನಾರ್ದನ ರೆಡ್ಡಿ ಮತ್ತು ಸುಷ್ಮಾ ಅಮ್ಮ ಅವರಿಗೆ ಆಭಾರಿಯಾಗಿದ್ದೇನೆ. ರಾಜಕೀಯವಾಗಿ ನಾನು ಇಷ್ಟು ಮುಂದುವರೆಯಲು ಅವರೇ ಕಾರಣ ಎಂದು ಎದೆ ತಟ್ಟಿ ಹೇಳುತ್ತೇನೆ. ಕರುಣಾಕರ ರೆಡ್ಡಿ ಚುನಾವಣಾ ಪ್ರಚಾರದಲ್ಲಿ ಗೈರು ಹಾಜರಾಗಿದ್ದಕ್ಕೆ ತಪ್ಪು ಕಲ್ಪನೆ ಬೇಡ, ಅವರು ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಹೊರಗಡೆ ಇದ್ದಾರೆ. ಇನ್ನು ಕೆಲ ದಿನಗಳಲ್ಲಿ ಅವರು ಬಳ್ಳಾರಿಗೆ ವಾಪಸಾಗಲಿದ್ದಾರೆ. ಬಳ್ಳಾರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ನಾವು ದುಡಿದಿದ್ದೇವೆ ಎನ್ನುವ ಮನಃಸಂತೋಷ ನಮಗಿದೆ ಎಂದರು.

ಬಿಜೆಪಿಯ ಕೆಲ ಸಂಪುಟ ಸಚಿವರು ನನ್ನನ್ನು ಪಕ್ಷದಿಂದ ಉಚ್ಛಾಟಿಸಲು ಕಾತುರರಾಗಿದ್ದರು. ಅವರ ಹೆಸರು ಹೇಳಲು ನಾನು ಬಯಸುವುದಿಲ್ಲ. ಲೋಕಾಯುಕ್ತ ವರದಿಯ ಬಗ್ಗೆ ಚರ್ಚಿಸುವ ಸಂಪುಟ ಸಭೆಯ ಮುನ್ನವೇ ನನ್ನನ್ನು ಪಕ್ಷದಿಂದ ಉಚ್ಛಾಟಿಸುವ ತೀರ್ಮಾನಕ್ಕೆ ಬಿಜೆಪಿ ಬಂದಿತ್ತು. ಹೀಗಾಗಿ ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದೆ. ಬಳ್ಳಾರಿ ಜಿಲ್ಲೆಯ ಎಲ್ಲಾ ಶಾಸಕರು ನನ್ನ ಜೊತೆ ಇದ್ದಾರೆ. ಆದರೆ ನಾನು ಯಾರನ್ನೂ ನನ್ನ ಕಡೆಗೆ ಸೆಳೆಯಲು ಯತ್ನಿಸಿಲ್ಲ ಎಂದು ರಾಮುಲು ಸ್ಪಷ್ಟಪಡಿಸಿದರು.

ನಾನು ಚುನಾವಣೆಯಲ್ಲಿ ಜಯಿಸುತ್ತೇನೆ ಎನ್ನುವ ಆಶಾಭಾವ ನನ್ನಲ್ಲಿದೆ. ಯಡಿಯೂರಪ್ಪ ಅವರ ಮೇಲೆ ನನಗೆ ತುಂಬಾ ಗೌರವ ಮತ್ತು ವಿಶ್ವಾಸವಿದೆ. ಸಿಬಿಐನವರು ಯಾವುದೇ ಕ್ಷಣದಲ್ಲಿ ಬಂಧಿಸಬಹುದು ಎನ್ನುವ ಭಯ ನನಗಿಲ್ಲ, ನಾನೇನೂ ತಪ್ಪು ಮಾಡಿಲ್ಲ. ದೇವರು ಬರೆದ ಹಾಗೆ ಆಗಲಿ ನನ್ನ ಜೀವನ. ನಾನು ಕಾಂಗ್ರೆಸ್ ಪಕ್ಷಕ್ಕೆ ಹತ್ತಿರವಾಗುತ್ತಿದ್ದೇನೆ ಎನ್ನುವ ಮಾತ್ರ ಸತ್ಯಕ್ಕೆ ದೂರವಾದುದು. ರಾಜಕೀಯದಲ್ಲಿ ಯಾರಿಗೆ ಯಾರೂ ದೊಡ್ಡವರಲ್ಲ, ಮತದಾರರೇ ಪ್ರಭುಗಳು ಎನ್ನುವ ವಿಷಯ ನಮಗೆ ತಿಳಿದಿದೆ ಎಂದು ರಾಮುಲು ಮಾತಿಗೆ ಮಂಗಳ ಹಾಡಿದರು.

English summary
Former Health Minister Sriramulu said I have not done any mistake. Says , he remain ever grateful to Janardhana Reddy and Sushma Swaraj for helping him scale political ladder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X