ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಧಿಕ ಮಧುಮೇಹಿಗಳ ತಪಾಸಣೆ ಬೆಂಗಳೂರು ವಿಶ್ವ ದಾಖಲೆ

By Mahesh
|
Google Oneindia Kannada News

Bangalore creates Guinness World Record, Diabetes check-up
ಬೆಂಗಳೂರು, ನ.14: ಭಾರತದ ಮಧುಮೇಹಿಗಳ ರಾಜಧಾನಿ ಎಂಬ ಖ್ಯಾತಿ ಗಳಿಸಿರುವ ಬೆಂಗಳೂರು ನಗರ ಈಗ ಮತ್ತೊಂದು ವಿಕ್ರಮ ಸಾಧಿಸಿದೆ.

ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಡೆದ ಮಧುಮೇಹ ತಪಾಸಣಾ ಶಿಬಿರದಲ್ಲಿ ಅತ್ಯಧಿಕ ಜನ ತಪಾಸಣೆಗೆ ಒಳಗಾಗುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಬರೆದಿದ್ದಾರೆ.

ನೋವೋ ನೋರ್ಡಿಸ್ಕ್ ಎಜುಕೇಷನ್ ಫೌಂಡೇಷನ್ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ತಕ್ತದಲ್ಲಿನ ಸಕ್ಕರೆ ಅಂಶ ಪತ್ತೆಗೆ ತಪಾಸನೆಗೆ ಒಳಗಾದವರ ಸಂಖ್ಯೆ 3,573 ಮೀರಿತ್ತು. ಇದು ಎಂಟು ಗಂಟೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಗ್ಲುಕೋಸ್ ಪ್ರಮಾಣ ಪರೀಕ್ಷೆ ಹಾಗೂ ಅಳತೆ ನಡೆಸಿದ ದಾಖಲೆಯಾಗಿದೆ.

ನೋವೋ ಸಂಸ್ಥೆಗೆ ಎಂಎಸ್ ರಾಮಯ್ಯ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆ ಸಿಬ್ಬಂದಿ ನೆರವು ನೀಡಿದರು. ನಟಿ ಪ್ರಿಯಾಂಕಾ ಉಪೇಂದ್ರ ಹಾಗೂ ಭಾವನಾ ರಾವ್ ಕೂಡಾ ತಪಾಸಣೆಯಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಹುರಿದುಂಬಿಸಿದರು.

English summary
Bangalore city creates a Guinness World Record for diabetes check-up. The event, organised by Novo Nordisk Education Foundation, on the eve of World Diabetes Day at Palace Grounds, set a record of the largest number of people tested for blood sugar levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X