ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಗೆ 4 ಲಕ್ಷ ಟ್ವಿಟ್ಟರ್ ಹಿಂಬಾಲಕರು

|
Google Oneindia Kannada News

Narendra Modi's followers in twitter to cross 4 Lakh
ಅಹಮದಾಬಾದ್, ನ 12: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಟ್ವಿಟರ್ ಖಾತೆ ಹೊಸ ದಾಖಲೆ ಬರೆಯುತ್ತಿದೆ. ಈಗಾಗಲೇ ಟ್ವಿಟ್ಟರಿನಲ್ಲಿ ಮೋದಿ ಫಾಲೊವರ್ಸ್ ಸಂಖ್ಯೆ 4 ಲಕ್ಷ ಗಡಿ ದಾಟಿದೆ. ದೇಶದ ರಾಜಕಾರಣಿಗಳಿಗೆ ಅಷ್ಟೊಂದು ಸಂಖ್ಯೆಯ ಟ್ವಿಟರ್ ಹಿಂಬಾಲಕರಿರುವುದು ಇದೇ ಪ್ರಪ್ರಥಮ. ಇದು ಅವರ ಜನಪ್ರಿಯತೆಗೂ ಕೈಗನ್ನಡಿ.

ಮೋದಿ ಮಾತ್ರವಲ್ಲದೇ ಇನ್ನಷ್ಟು ರಾಜಕಾರಣಿಗಳು ಟ್ವಿಟ್ಟರ್ ಪ್ರೊಫೈಲ್ ಹೊಂದಿದ್ದಾರೆ. ಇದರಲ್ಲಿ ಕೆಲವರ ಟ್ವಿಟ್ ಗಳು ಅವರನ್ನು ಸಮಸ್ಯೆಯ ಸುಳಿಗೆ ಸಿಲುಕಿಸಿವೆ. ಉದಾಹರಣೆಗೆ ಶಶಿ ತರೂರು ಟ್ವಿಟ್ ಹಿಂದೊಮ್ಮೆ ವಿವಾದದ ಕೇಂದ್ರ ಬಿಂದು ಆಗಿತ್ತು. ಲಲಿತ್ ಮೋದಿ ಮತ್ತು ಶಶಿ ತರೂರು ಟ್ವಿಟ್ ಅವರ ಉದ್ಯೋಗಕ್ಕೆ ಕುತ್ತು ಆಗಿತ್ತು.

ಉಳಿದಂತೆ ಒಮರ್ ಅಬ್ದುಲ್ಲಾ ಟ್ವಿಟ್ ಯಾವತ್ತಿಗೂ ವಿವಾದವನ್ನು ಉಂಟು ಮಾಡುತ್ತದೆ. ಸುಷ್ಮಾ ಸ್ವರಾಜ್ ಟ್ವಿಟ್ಟಿಸುವುದು ಅವರ ಪಕ್ಷಕ್ಕೆ ಇರಿಸುಮುರಿಸು ಉಂಟಾಗುತ್ತಿತ್ತು.

ಇಂತಹ ಪ್ರಕರಣಗಳಿಗೆ ಹೋಲಿಸಿದರೆ ನರೇಂದ್ರ ಮೋದಿ ಇಷ್ಟೊಂದು ಹಿಂಬಾಲಕರನ್ನು ಹೊಂದಿರುವುದು ಸಣ್ಣ ಸಾಧನೆಯಲ್ಲ. ಅವರು ಏನು ಟ್ವಿಟ್ಟಿಸಿದರೂ ಸುದ್ದಿಯಾಗುತ್ತದೆ. ಗುಜರಾತ್ ಸಮಸ್ಯೆಗಳು, ಆಡಳಿತ ಇತ್ಯಾದಿಗಳನ್ನು ಟ್ವಿಟ್ಟಿಸುತ್ತಾರೆ. ಮೋದಿ ಇಂಗ್ಲಿಷ್ ಕೂಡ ತುಂಬಾ ಸರಳವಾಗಿದ್ದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತ್ತಿದೆ.

ನರೇಂದ್ರ ಮೋದಿಗಿಂತ ತುಸು ಕಡಿಮೆ ಟ್ವಿಟ್ಟರ್ ಹಿಂಬಾಲಕರು ಇರುವುದು ಶಶಿ ತರೂರ್ ಗೆ. ನರೇಂದ್ರ ಮೋದಿ ತನ್ನ ವೆಬ್ ಸೈಟ್ ಮೂಲಕವೂ ಇ-ಆಡಳಿತ ನಡೆಸುತ್ತಾರೆ. ಒಂದು ಮೂಲದ ಪ್ರಕಾರ ಅವರ ವೆಬ್ ಸೈಟಿಗೆ ದಿನಕ್ಕೆ ಕಡಿಮೆಯೆಂದರೂ 500 ಇಮೇಲ್ ಗಳು ಬರುತ್ತವೆಯಂತೆ.

ನರೇಂದ್ರ ಮೋದಿ ಈ ಇಮೇಲ್ ಗಳನ್ನು ಸೀರಿಯಸ್ ಆಗಿ ಅವಲೋಕಿಸಿ ಮಾರುತ್ತರ ನೀಡುತ್ತಾರೆ. ಯಾವುದಾದರೂ ಸಮಸ್ಯೆಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸುತ್ತಾರೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿರುವ ಐಡಿಯಾಗಳನ್ನು ಹಂಚಿಕೊಳ್ಳಲು ಕೂಡ ಅವರ ವೆಬ್ ಸೈಟ್ ನೆರವಾಗುತ್ತದೆ.

ನರೇಂದ್ರ ಮೋದಿ ಅಫೀಷಿಯಲ್ ಫೇಸ್ ಬುಕ್ ಫ್ಯಾನ್ ಪುಟವನ್ನು ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಮೋದಿ ಭಾಷಣಗಳು ಯು-ಟ್ಯೂಬ್ ನಲ್ಲಿ ಯಾವತ್ತಿಗೂ ಹೆಚ್ಚು ನೋಡಲ್ಪಟ್ಟದಾಗಿರುತ್ತವೆ.

ಟ್ವಿಟ್ಟರ್ ಹಿಂಬಾಲಕರ ವಿಷ್ಯದಲ್ಲಿ ನಾವು ಕೂಡ ಕಡಿಮೆ ಇಲ್ಲ.

English summary
Ahmedabad: The number of followers on Twitter ‘following’ Narendra Modi is all set to cross the 400,000 figure. This achievement is commendable since Indian politicians have been rather slow and hesitant in embracing modern social networking or keeping a virtual presence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X