ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಕ್ಕೆ ಮುರಿದ ಹಕ್ಕಿ ಕಿಂಗ್‌ಫಿಷರ್‌ನಿಂದ ಸದಸ್ಯರಿಗೆ ಪತ್ರ

By Prasad
|
Google Oneindia Kannada News

Kingfisher in financial crisis
ಬೆಂಗಳೂರು, ನ. 11 : ಹಣಕಾಸು ಮುಗ್ಗಟ್ಟಿನಿಂದ ರೆಕ್ಕೆಯನ್ನು ಕಳೆದುಕೊಂಡಿರುವ ಕಿಂಗ್ ಫಿಷರ್ ಏರ್‌ಲೈನ್ಸನ್ನು ಏರ್ ಇಂಡಿಯಾದಂತೆ ಮೇಲೆತ್ತಲು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಕೈ ಎತ್ತಿದ್ದರೆ, ಕಿಂಗ್ ಫಿಷರ್ ಇನ್ನೂ ರೆಕ್ಕೆ ಮುರಿದುಕೊಂಡಿಲ್ಲ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಪುಟಿದೇಳಲಿದೆ ಎಂದು ಏರ್‌ಲೈನ್ಸ್ ನ ಉಪಾಧ್ಯಕ್ಷ ತನ್ನ 'ಕಿಂಗ್' ಕ್ಲಬ್ ಸದಸ್ಯರಿಗೆ ಪತ್ರ ರವಾನಿಸಿದೆ.

ಸಿಕ್ಕಾಪಟ್ಟೆ ದುಬಾರಿ ಟಿಕೆಟ್ ಬೆಲೆ ಮತ್ತು ಕಡಿಮೆ ಪ್ರತಿಫಲದಿಂದಾಗಿ ಸಂಸ್ಥೆ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿರುವುದು ನಿಜವಾದರೂ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಸಿಬ್ಬಂದಿಗಳ ಕೊರತೆಯಿಂದಲ್ಲ. ಗ್ರಾಹಕರಿಗೆ ಅನನುಕೂಲವಾಗಿರುವುದಕ್ಕೆ ಕ್ಷಮೆ ಕೋರುತ್ತೇವೆ ಎಂದು ಉಪಾಧ್ಯಕ್ಷ ಅನ್ಶು ಸರೀನ್ ಪತ್ರ ಬರೆದಿದ್ದಾರೆ.

ಈ ಕ್ಷಣ ಸಂಸ್ಥೆ ನಾನಾ ಸವಾಲುಗಳನ್ನು ಎದುರಿಸುತ್ತಿದೆ. ದೀರ್ಘಕಾಲದ ಲಾಭ ಗಳಿಸುವ ಉದ್ದೇಶದಿಂದ ಕೆಲ ಕ್ರಮಗಳನ್ನು ಕಿಂಗ್‌ಫಿಷರ್ ತೆಗೆದುಕೊಳ್ಳುತ್ತಿದೆ. ಈ ಕಾರಣದಿಂದಾಗಿ ಸಂಸ್ಥೆಯ ರೂಪುರೇಷೆಯನ್ನೇ ಬದಲಾಯಿಸಲಾಗುತ್ತಿದೆ. ಇದಕ್ಕೆ ಕೆಲ ಸಮಯ ಬೇಕಾಗಿರುವುದರಿಂದ ವಿಜಯ್ ಮಲ್ಯ ಮಾಲಿಕತ್ವದ ಸಂಸ್ಥೆ ಕೆಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಬೇಕಾಯಿತು ಎಂದಿದ್ದಾರೆ ಸರೀನ್.

ಆಂತರಿಕ ಮಾರ್ಪಾಡುಗಳೆಲ್ಲ ಪೂರ್ತಿಯಾದ ಮೇಲೆ ಎಲ್ಲ 350 ವಿಮಾನಗಳು ದಿನನಿತ್ಯ ಹಾರಾಟ ನಡೆಸಲಿವೆ. ಅಲ್ಲಿಯವರೆಗೆ ಸದಸ್ಯರು ತಾಳ್ಮೆಯಿಂದ ಇರಬೇಕು ಮತ್ತು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ. ಆದರೆ, ಬಿಕ್ಕಟ್ಟಿನಿಂದ ಹೊರತರಲು ಕೇಂದ್ರ ಸರಕಾರವನ್ನು ಕೇಳಿರುವುದು ಸತ್ಯ. ಕಿಂಗ್ ಫಿಷರ್ ಕಂಪನಿಯನ್ನು ರಕ್ಷಿಸಲು ಬ್ಯಾಂಕ್ ಗಳೇ ಮುಂದೆ ಬರಬೇಕೆಂದು ಆರ್ಥಿಕ ಸಚಿವರು ಬ್ಯಾಂಕ್ ಗಳನ್ನು ಕೇಳಿದ್ದಾರೆ.

English summary
Kingfisher airlines, owned by liquor baron Vijay Mallya has sent an email to its club members with clarification about the present status. The mail sent by Vice-president Anshu Sarin has said that it is reconfiguring the airlines keeping in mind longtime profitability.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X