ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮಹಾತಾಯಿ 20ನೇ ಮಗುವಿಗೆ ಜನ್ಮ ನೀಡಲಿದ್ದಾಳೆ!

By Srinath
|
Google Oneindia Kannada News

us-mom-gets-ready-to-give-birth-20th-child
ವಾಷಿಂಗ್ಟನ್, ನ.11: ಇಂದು ಅದೆಂಥದ್ದೋ ದಿನ ವಿಶೇಷವೆಂದು ಜಗತ್ತಿನಾದ್ಯಂತ ಮಕ್ಕಳನ್ನು ಹೆರಲು ತಾಯಂದಿರು ನಾಮುಂದು ತಾ ಮುಂದು ಎನ್ನುತ್ತಿದ್ದಾರೆ. ಆದರೆ ಅಮೆರಿಕ ಈ ಮಹತಾಯಿ ತನ್ನ 20ನೇ ಮಗುವಿಗೆ ಜನ್ಮ ನೀಡಲು ಸಾವಕಾಶವಾಗಿ ಸಿದ್ಧತೆ ನಡೆಸಿದ್ದಾಳೆ. ಅದೂ ಮುಂದಿನ ವಾರದಲ್ಲಿ...

ಮೈಕೇಲ್ ಡುಗ್ಗಾರ್ ಗಹೆಸರಿನ 45 ವರ್ಷಚದ ಈ ಮಹಿಳೆ ಗುರುವಾರ ಜಗತ್ತಿಗೆ ಈ ಸುದ್ದಿ ನೀಡಿದ್ದಾಳೆ. ಗಂಡ ಜಿಮ್ ಬಾಬ್ ಜತೆ ಸೇರಿ ಇದುವರೆಗೆ 19 ಹೆತ್ತಿದ್ದರೂ ಇನ್ನೂ ಒಂದಕ್ಕೆ ಜನ್ಮ ನೀಡಲು ತಮಗೆ ಕಾತುರ ಹೆಚ್ಚಾಗಿದೆ ಎಂದು ಡುಗ್ಗಾರ್ ನಾಚುತ್ತಾ ತಿಳಿಸಿದ್ದಾರೆ. ಬೆಸ ಸಂಖ್ಯೆಯಲ್ಲಿ (19) ನಿಲ್ಲಿಸಬಾರದು ಎಂದು 20 ನೆಯದ್ದಕ್ಕೆ ಸಿದ್ಧತೆ ನಡೆಸಿದೆವು ಎಂದು ಗಂಡ ಜಿಮ್ ತಲೆಯಾಡಿಸುತ್ತಾನೆ.

ಅಂದ ಹಾಗೆ, ಈ ದಂಪತಿಗೆ ಇದುವರೆಗೆ 10 ಮಂದಿ ಪುತ್ರರು ಮತ್ತು 9 ಮಂದಿ ಪುತ್ರಿಯರು! ಈ ಮಕ್ಕಳ ವಯಸ್ಸು 23 ತಿಂಗಳಿಂದ 23 ವರ್ಷದವರೆಗೂ ಇದೆ. ದೇವರು ಮತ್ತೊಂದನ್ನು ಕರುಣಿಸುತ್ತಿರುವುದರ ಬಗ್ಗೆ ಈ ಕುಟುಂಬಕ್ಕೆ ವಿಪರೀತ ಸಂತೋಷವಾಗಿದೆಯಂತೆ. 'ಬೀದಿಗೊಂದು ಮಗು ಸಾಕು' ಎನ್ನುತ್ತಿರುವ ಇಂದಿನ ಕಾಲ ಮಾನದಲ್ಲಿ ಒಂದೇ ಕುಟುಂಬದಲ್ಲಿ ಹತ್ತಲ್ಲ, ಇಪ್ಪತ್ತು! ನಿಜಕ್ಕೂ ಇವರದು ತುಂಬು ಕುಟುಂಬವೇ. (ಒಮ್ಮೆ ಮೇಲಿನ ಚಿತ್ರ ನೋಡಿ, ಆನಂದಿಸಿ)

ಈ ಕುಟುಂಬ ತನ್ನದೇ ಆದ ವೆಬ್‌ಸೈಟ್‌ ವ್ಯಾಪಾರ ಹೊಂದಿದ್ದು, ಇಂಟರ್ನೆಟ್‌ ಮೂಲಕ ತಾಯ್ತನದ ಬಗ್ಗೆ ತಮ್ಮ ಅನುಭವಾಮೃತವನ್ನು ಧಾರೆ ಎರೆಯುತ್ತಿದ್ದಾರೆ.

English summary
US Mom Michelle Duggar proudly announced to the world yesterday (Nov 10) that she's expecting a baby. Michelle Duggar and her husband Jim Bob have 10 sons and 9 daughters! Amid the joy, Bob added, We didn't want to stop on an odd number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X