ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವಿಪತಿ ಕೊಂದು ನಿರ್ಲಿಪ್ತಳಾದ ವಕೀಲೆ ಶುಭಾ

By Mahesh
|
Google Oneindia Kannada News

Lawyer Shubha
ಬೆಂಗಳೂರು, ನ.11: ತ್ವರಿತ ನ್ಯಾಯಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾದರೂ ಹಂತಕಿ ಶುಭ ಕಮ್ಮಕ್ ಕಿಮಿಕ್ ಅನ್ನಲಿಲ್ಲ. ಮಾಧ್ಯಮಗಳು ಬೆಂಬಿಡದೆ ಆಕೆ ಹಿಂದೆ ಸುತ್ತಿದರೂ ಆಕೆ ಹೇಳಿದ್ದು ಒಂದೇ ವಾಕ್ಯ 'ನೋ ಕಮೆಂಟ್ಸ್'

ಇಂಟೆಲ್ ಟೆಕ್ಕಿ ಭಾವಿಪತಿ ಬಿ.ವಿ. ಗಿರೀಶ್ ಕೊಂದು ಪ್ರಿಯಕರನೊಂದಿಗೆ ಜೈಲು ಸೇರಿದ ಶುಭಾ ಮನಸ್ಥಿತಿ, ನಿರ್ಲಿಪ್ತತೆ, ಮೌನ ಕಂಡು ಪೊಲೀಸರು, ಜೈಲು ಅಧಿಕಾರಿಗಳೇ ಬೆರಗಾಗಿದ್ದಾರೆ. ಜೈಲಿನಲ್ಲಿದ್ದುಕೊಂಡೆ ತನ್ನ ವಕೀಲಿಕೆಯ ಪಾಠಗಳನ್ನು ಮುಂದುವರೆಸಿದ ಶುಭಾಗೆ ಈ ರೀತಿ ಕ್ರೌರ್ಯ ಮಾಡಿ ಕೂಡಾ ಅನಂತ ಮೌನವಹಿಸುವ ಶಕ್ತಿ ಎಲ್ಲಿಂದ ಲಭಿಸಿತು.

ಮನೋಶಾಸ್ತ್ರಜ್ಞರು, ಕ್ರಿಮಿನೋಲಾಜಿಸ್ಟ್ ಗಳಿಗೆ ಅಥವಾ ನಮ್ಮ ಚಿತ್ರರಂಗದ ಸತ್ವಯುತ ನಿರ್ದೇಶಕರಿಗೆ ಶುಭಾ ಜೀವಂತ ಕಥಾವಸ್ತುವಾಗಬಲ್ಲರು. ಆದರೆ, ಶುಭಾ ಮಾತಾಡಿದಾಗ ಮಾತ್ರ.

ಕ್ರಿಮಿನಲ್ ಮೈಂಡ್ ಶುಭಾ: ಮಾಸ್ಟರ್ ಪ್ಲ್ಯಾನ್ ಮಾಡಿ ಗಿರೀಶ್ ಕೊಂದ ಶುಭಾ ವಿವೇಕ ನಗರ ಇನ್ಸ್ ಪೆಕ್ಟರ್ ತನಿಖಾಧಿಕಾರಿ ಕೆಎ ನಾಣಯ್ಯ ಅವರೇ ತಲೆದೂಗುತ್ತಾರೆ.

ಕೊಲೆಗೂ ಮುನ್ನ ಔಟರ್ ರಿಂಗ್ ರೋಡ್ ಸ್ಟಡಿ ಮಾಡಿದ್ದ ಶುಭಾ, ಅಲ್ಲಿ ಕಳ್ಳಕಾಕರ ಹಾವಳಿಯನ್ನು ಖಾತ್ರಿ ಪಡಿಸಿಕೊಂಡಿದ್ದಳು.

ಕಳ್ಳ ಬಂದು ಹಿಂದಿನಿಂದ ರಾಡ್ ನಲ್ಲಿ ಹೊಡೆದ ನನಗೇನು ಗೊತ್ತಿಲ್ಲ ಎಂದು ಕಥೆ ಕಟ್ಟುವಾಗ ಮಾತ್ರ ಶುಭಾ ಚಂಚಲಾಗಿದ್ದಳು. ಯೋಜನೆ ಪೂರ್ಣವಾದ ಮೇಲೆ ಮುಂದಿನ ಪರಿಣಾಮದ ಬಗ್ಗೆ ಸರಿಯಾಗಿ ಪ್ಲ್ಯಾನ್ ಮಾಡಲು ಮರೆತಿದ್ದು ಆಕೆಗೆ ಮುಳುವಾಯಿತು.

ಪ್ರಿಯಕರ ಅರುಣ್ ವರ್ಮಾ ಗೆ ಪ್ರತಿಕ್ಷಣ ಮೆಸೇಜ್ ಕಳಿಸುತ್ತಾ ಜಿಪಿಎಸ್ ರೀತಿಯಲ್ಲಿ ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದ್ದಳು.

ಕ್ಲ್ಯೂ ಕೊಟ್ಟ ವಿಡಿಯೋ: ಕೊಲೆಗೂ ಕೆಲ ದಿನಗಳ ಮುನ್ನ ಗಿರೀಶ್ ಜೊತೆ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥಕ್ಕೆ ಅರುಣ್ ಕೂಡಾ ಬಂದಿದ್ದ. ಅರುಣ್ ಬಂದ ಮೇಲೆ ಆಕೆ ಮುಖದಲ್ಲಿ ಮೂಡಿದ ಮಂದಹಾಸ ಕಂಡ ಪೊಲೀಸರಿಗೆ ಎಲ್ಲವೂ ಅರ್ಥವಾಗಿತ್ತು.

ಆದ್ರೆ, ಕೇಸ್ ಸುಲಭ ಇರಲಿಲ್ಲ. ಆಕೆ ಎಸ್ಸೆಂಎಂಸ್, ಕಾಲ್ ರಿಜಿಸ್ಟ್ರಿ ಕೈಗೆ ಸಿಕ್ಕರೂ ಕೋರ್ಟ್ ತಲುಪುವಾಗ ಬದಲಾಗಿತ್ತು. ಆದರೆ, ನಂತರ ಅಸಲಿ ಕಾಲ್ ರಿಜಿಸ್ಟ್ರಿ ಕೈ ತಲುಪಿತು. ಅರುಣ್ ತನ್ನ ಕಸಿನ್ ದಿನೇಶ್ ಹಾಗೂ ಸ್ಥಳೀಯ ಗೂಂಡಾ ವೆಂಕಟೇಸ್ ಕರೆ ಆಧಾರವಾಗಿ ಸಿಕ್ಕಿತು.

ಜನವರಿ 2004ರಲ್ಲಿ ನಾಲ್ವರನ್ನು ಬಂಧಿಸಿ ವಿಚಾರಿಸಿದಾಗ ಸತ್ಯ ಹೊರಬಿದ್ದಿತು. ಆದ್ರೆ..ಎಂದು ಹೇಳಿ ಇನ್ಸ್ ಪೆಕ್ಟರ್ ನಾಣಯ್ಯ ಸುಮ್ಮನಾದರು.

ಇದು ಮೊದಲ ಕೊಲೆ ಪ್ರಯತ್ನವಲ್ಲ. ನಿಶ್ಚಿತಾರ್ಥಕ್ಕೆ ಮೊದಲೇ ಗಿರೀಶ್ ಹೆಣ ಬೀಳಿಸಲು ಸ್ಕೆಚ್ ನಡೆದಿತ್ತು...ಮುಂದೆ ಓದಿ

English summary
Intel Techie Girish Murder Case: Supreme Court today(Nov.11) upheld HC decision and rejected bail plea by convicted Lawyer Shubha and others. Earlier, HC awarded life imprisonment punishment to Shubha and four others. Shubha a lawyer by profession not given any reaction after hearing the verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X