ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲಕಚ್ಚಿದ ಕಿಂಗ್ ಫಿಷರ್ ಹಾರಾಟ, ಕೈ ಕಚ್ಚಿಕೊಂಡ ಮಲ್ಯ

By Mahesh
|
Google Oneindia Kannada News

Vijay Mallya
ನವದೆಹಲಿ, ನ.11: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಗಳು ನೆಲಕಚ್ಚಿ ನಿಂತಿದೆ. ದಿನಕ್ಕೆ ಕನಿಷ್ಠ 50ಕ್ಕೂ ಅಧಿಕ ವಿಮಾನಗಳ ಹಾರಾಟ ಕ್ಯಾನ್ಸಲ್ ಮಾಡುತ್ತಿದ್ದ ಕಿಂಗ್ ಫಿಷರ್ ಗೆ ಡಿಜಿಸಿಎ ನೋಟಿಸ್ ನೀಡಿದೆ. ಗಾಯದ ಮೇಲೆ ಬರೆ ಎಂಬಂತೆ ಗುರುವಾರ 100ಕ್ಕೂ ಅಧಿಕ ಪೈಲಟ್ ಗಳು ಕಿಂಗ್ ಫಿಷರ್ ಗೆ ಗುಡ್ ಬೈ ಹೇಳಿದ್ದಾರೆ.

ಗುರುವಾರ(ನ.10) ಸುಮಾರು 80 ವಿಮಾನಗಳು ಕ್ಯಾನ್ಸಲ್ ಆದಾಗ ಮಲ್ಯ ಕಂಗಾಲಾಗಿದ್ದರು. ನೂರಾರು ಜನ ಪೈಲಟ್ ಗಳು ಸಂಬಳ ಸಿಗಲಿಲ್ಲ ಎಂದು ನೆಪವೊಡ್ಡಿ ಸಂಸ್ಥೆ ಬಿಟ್ಟು ಹೊರ ನಡೆದಿದ್ದಾರೆ.

ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುವ ಕಿಂಗ್ ಫಿಷರ್ ಗೆ Directorate General of Civil Aviation (DGCA) ಶೋಕಾಸ್ ನೋಟಿಸ್ ನೀಡಿದೆ. ಪ್ರಯಾಣಿಕರಿಗೆ ವಿಮಾನ ಟಿಕೆಟ್ ದರ ವಾಪಾಸ್ಸಾತಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಡಿಜಿಸಿಎ ಸೂಚಿಸಿದೆ.

ಮಲ್ಯ ಕಂಗಾಲು: ಶ್ರೀಮಂತ ಕುಳ ಮಲ್ಯ ತಲೆ ಮೇಲೆ 7057 ಕೋಟಿ ರೂ ಸಾಲವನ್ನು ಕಿಂಘ್ ಫಿಷರ್ ವಿಮಾನಯಾನ ಎತ್ತಿ ಹಾಕದೆ. HPCL ಇಂಧನ ಪೂರೈಕೆ ವ್ಯತ್ಯಯದಿಂದ ಆರಂಭವಾದ ತೊಂದರೆ ಕಿಂಗ್ ಫಿಷರ್ ಗೆ ಮುಳುವಾಗಿದೆ. ಕಿಂಗ್ ಫಿಷರ್ ಬಹುತೇಕ ಹಾರುವ ಶಕ್ತಿಯನ್ನು ಕಳೆದುಕೊಂಡಿದೆ.

English summary
Extending the jittery for the liquor baron Vijay Mallya, 100 pilots of Kingfisher airlines resigned on Thursday, Nov 10 when more than 80 flights of the airline have been cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X