ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿ ಗಿರೀಶ್ ಕೊಲೆ ಪ್ರಕರಣ, ಹಂತಕಿ ಶುಭಾಗೆ 'ನೋ' ಬೇಲ್

By Mahesh
|
Google Oneindia Kannada News

No bail to Intel techie murderer Shubha
ನವದೆಹಲಿ/ಬೆಂಗಳೂರು, ನ.11: ಇಂಟೆಲ್ ಟೆಕ್ಕಿ ಬಿವಿ ಗಿರೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸುಂದರ ಹಂತಕಿ ಶುಭಾಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಕ್ರಿಮಿನಲ್ ಬುದ್ಧಿಯ ಲಾಯರ್ ಶುಭಾ ಈಗ ವಿಚಾರಣಾಧೀನ ಖೈದಿಯಲ್ಲ. ಅಪರಾಧಿಯಾಗಿದ್ದಾರೆ ಎಂಬ ವಾದವನ್ನು ಮನ್ನಿಸಿದ ಸುಪ್ರೀಂಕೋರ್ಟ್ ಶುಭಾ ಹಾಗೂ ನಾಲ್ವರು ಸಹಚರರ ಜಾಮೀನು ಅರ್ಜಿಯನ್ನು ಶುಕ್ರವಾರ(ನ.11) ವಜಾಗೊಳಿಸಿದೆ.

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಶುಭಾ ಅವರ ವಕೀಲ ಸಿವಿ ನಾಗೇಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಬೇಕಿದೆ. ಆದರೆ, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ಶುಭಾಗೆ ಬೇಲ್ ನೀಡಲು ನಿರಾಕರಿಸಿದೆ.

ಕೇಸ್ ಹಿಸ್ಟರಿ: 2003ರ ಡಿಸೆಂಬರ್ 3ರಂದು ವಿವೇಕನಗರ ಠಾಣಾ ವ್ಯಾಪ್ತಿಯ ಕೋರಮಂಗಲ ಹೊರ ವರ್ತುಲ ರಸ್ತೆಯಲ್ಲಿ ಇಂಟೆಲ್ ಟೆಕ್ಕಿ ಬಿ.ವಿ ಗಿರೀಶ್ (27) ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಪ್ರಮುಖ ಆರೋಪಿ ಶುಭಾ ಹಾಗೂ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ 17 ನೇ ತ್ವರಿತ ನ್ಯಾಯಾಲಯ ಆದೇಶ ಹೊರಡಿಸಿತ್ತು.

ನೋ ಕಮೆಂಟ್ಸ್ ಸುಂದರಿ ಮನಸ್ಥಿತಿ ಹೇಗಿದೆ...?

English summary
Intel Techie Girish Murder Case: Supreme Court today(Nov.11) upheld HC decision and rejected bail plea by convicted Lawyer Shubha and others. Earlier, HC awarded life imprisonment punishment to Shubha and four others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X