ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಿಂದ 3 ವಿಚಾರಣಾಧೀನ ಕೈದಿಗಳು ಪರಾರಿ

By Prasad
|
Google Oneindia Kannada News

3 under-trials escape from Athani jail
ಬೆಳಗಾವಿ/ಬಿಜಾಪುರ, ನ. 11 : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿರುವ ಸಬ್-ಜೈಲಿನ ಹಿಂಬದಿಯ ಗೋಡೆಗೆ ಕನ್ನ ಹಾಕಿ ಮೂವರು ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಪರಾರಿಯಾಗಿರುವವರನ್ನು ಕಾಡಯ್ಯ ಪೂಜಾರಿ, ಯೇಸುರತ್ನ ಮತ್ತು ರೇವಪ್ಪ ಎಂದು ಗುರುತಿಸಲಾಗಿದೆ. ಬಂಗಾರದೊಡವೆಗಳನ್ನು ಕದ್ದ ಆರೋಪಕ್ಕೆ ಸಂಬಂಧಿಸಿದಂತೆ ಅವರು ವಿಚಾರಣೆಯನ್ನು ಎದುರಿಸುತ್ತಿದ್ದರು. ಇನ್ನೂ ಅನೇಕ ಕಳ್ಳತನ ಮಾಡಿದ ಮಾಡಿದ ಆರೋಪ ಅವರ ಮೇಲಿವೆ.

ತಪ್ಪಿಸಿಕೊಂಡಿರುವ ಆರೋಪಿಗಳನ್ನು ಹಿಡಿಯಲು ಪೊಲೀಸರು ಮತ್ತೆ ಬಲೆ ಬೀಸಿದ್ದಾರೆ. ಹಾಗೆಯೆ, ಈ ಪರಾರಿ ಪ್ರಕರಣದ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಲಾಗಿದೆ.

ಪೊಲೀಸರ ಸಾಹಸ : ಬಿಜಾಪುರದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಓಡುತ್ತಿರುವ ರೈಲಿನಿಂದ ಜಿಗಿದು ಪರಾರಿಯಾಗಲು ಕೈದಿ ಯತ್ನಿಸಿದ್ದಾನೆ. ಅವನನ್ನು ಕರೆತರುತ್ತಿದ್ದ ಪೊಲೀಸರು ಕೂಡ ರೈಲಿನಿಂದ ಜಿಗಿದು ಆತನನ್ನು ಹಿಡಿದು ಸಾಹಸ ಮೆರೆದಿದ್ದಾರೆ.

ಮಹಾರಾಷ್ಟ್ರದ ಯರವಾಡ ಜೈಲಿನಿಂದ ಬಿಜಾಪುರಕ್ಕೆ ಆತನನ್ನು ಇಬ್ಬರು ಪೊಲೀಸರು ಕರೆತರುತ್ತಿದ್ದರು. ಆಗ, ಸಮಯ ನೋಡಿ ರೈಲಿನಿಂದ ಜಿಗಿದು ಓಡಲು ಕೈದಿ ಯತ್ನಿಸಿದ್ದಾನೆ. ಕೈದಿ ಮತ್ತು ಇಬ್ಬರು ಪೊಲೀಸರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

English summary
In one incident 3 under-trials have escaped from sub-jail in Athani in Belgaum district on Thursday night. In another incident an under-trial injured while escaping from running train in Bijapur. The police also jumped from train and nabbed him. Hats off to those two police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X