ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವಿಕಿಪೀಡಿಯ ಪ್ರಥಮ ಸಮಾವೇಶಕ್ಕೆ ಸಿದ್ಧತೆ

By Mahesh
|
Google Oneindia Kannada News

Wikipedia Mumbai
ಮುಂಬೈ, ನ.10: ಆನ್ ಲೈನ್ ಮುಕ್ತಕೋಶ ವಿಕಿಪೀಡಿಯ ಭಾರತದಲ್ಲಿ ತನ್ನ ಕಚೇರಿ ಆರಂಭಿಸಿದ ಬೆನ್ನಲ್ಲೇ ತನ್ನ ಚಟುವಟಿಕೆಗಳಿಗೆ ಚಾಲನೆ ಕೊಟ್ಟಿದೆ. ಪ್ರಪ್ರಥಮ ಬಾರಿಗೆ ಮೂರು ದಿನಗಳ ರಾಷ್ಟ್ರೀಯ ಸಮಾವೇಶ ನಡೆಸಲು ವಿಕಿಪೀಡಿಯ ಮುಂದಾಗಿದೆ.

ನ.18ರಂದು ಆರಂಭವಾಗುವ ಈ ಸಮಾವೇಶಕ್ಕೆ ವಿಕಿಪೀಡಿಯ ಸ್ಥಾಪಕ ಜಿಮ್ಮಿ ವೇಲ್ಸ್ ಆಗಮಿುತ್ತಿರುವುದು ವಿಶೇಷ. ಮುಂಬೈ ವಿಶ್ವವಿದ್ಯಾಲಯದ ಫೋರ್ಟ್ ಆವರಣದ ಕನ್ವೇವೇಷನ್ ಹಾಲ್ ನಲ್ಲಿ ಈ ಪ್ರಥಮ ವಿಕಿ ಕಾನ್ಫರೆನ್ಸ್ ನಡೆಯಲಿದೆ.

ಸಮಾವೇಶದ ಬಗ್ಗೆ ಮಾತನಾಡಿದ ವಿಕಿಮೀಡಿಯಾದ ಅಧ್ಯಕ್ಷ ಅರ್ಜುನ್ ರಾವ್ ಚಾವ್ಲಾ. 'ವಾರ್ಷಿಕವಾಗಿ ಈ ರೀತಿ ವಿಕಿ ಸಮಾವೇಶವನ್ನು ಆಯೋಜಿಸಿ ಭಾರತದಲ್ಲಿರುವ ಎಲ್ಲಾ ವಿಕಿಪೀಡಿಯನ್ಸ್ ಗಳನ್ನು ಒಂದೆಡೆ ಸೇರಿಸುವ ಯೋಜನೆ ಇದೆ.

ಸುಮಾರು 20ಕ್ಕೂ ಅಧಿಕ ಭಾರತೀಯ ಭಾಷೆಗಳಲ್ಲಿರುವ ಮುಕ್ತ ಮಾಹಿತಿ ಹಂಚಿಕೆ ಬಗ್ಗೆ ಚರ್ಚೆ ನಡೆಸಬಹುದು. ಮುಕ್ತ ಹಾಗೂ ಉಚಿತ ಶೈಕ್ಷಣಿಕ ಯೋಜನೆಗಳನ್ನು ರೂಪಿಸಬಹುದು ಎಂದು ರಾವ್ ಹೇಳಿದರು.

ಸಮಾವೇಶದ ಉಸ್ತುವಾರಿ ವಹಿಸಿಕೊಂಡಿರುವ ಪ್ರಣವ್ ಮಾತನಾಡಿ, ಜಿಮ್ಮಿ ವೇಲ್ಸ್ ಅವರ ಜಗತ್ತಿನ ಪ್ರತಿಯೊಬ್ಬರು ತಮ್ಮದೇ ಭಾಷೆಯಲ್ಲಿ ಮುಕ್ತವಾಗಿ ಮಾಹಿತಿಯನ್ನು ಪಡೆಯುವಂತಾಗಬೇಕು. ಎರಡನೇ ಭಾಷೆ ಅಥವಾ ಬೇರೆ ಸಂಪರ್ಕ ಭಾಷೆಯಿಂದ ಜ್ಞಾನ ಪಡೆಯುವುದು ಅಸಾಧ್ಯ' ಆಶಯದಂತೆ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

English summary
The online encyclopaedia - Wikipedia, which has opened its first ever officein India, is going to hold its first ever national conference in the country. The three-day-long conference will be held in Mumbai from Nov 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X