ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಕಾರ್ಪೊರೇಟರುಗಳಿಗೆ ಲ್ಯಾಪ್‌ಟಾಪ್‌ ಕೊಡುಗೆ

By Srinath
|
Google Oneindia Kannada News

laptops-to-adore-all-bbmp-corporators
ಬೆಂಗಳೂರು, ನ. 9: ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ (BBMP) ಎಲ್ಲ ನಗರಸಭಾ ಸದಸ್ಯರು (ಕಾರ್ಪೊರೇಟರುಗಳು) ಸಂಪೂರ್ಣವಾಗಿ ಇ ಆಡಳಿತಕ್ಕೆ ಅಂಕಿತವಾಗಲು ಸಿದ್ಧತೆ ನಡೆಸಿದ್ದಾರೆ.

'BBMP, ಪಕ್ಷಾತೀತವಾಗಿ ಎಲ್ಲ ಕಾರ್ಪೊರೇಟರುಗಳಿಗೂ ತಲಾ 30-50 ಸಾವಿರ ರುಪಾಯಿ ವೆಚ್ಚದಲ್ಲಿ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವ ನಿರ್ಣಯ ಕೈಗೊಳ್ಳಲಾಗಿದೆ. ಕಾರ್ಪೊರೇಟರುಗಳ ಜತೆಗೆ ಕೆಲವು ಹಿರಿಯ ಅಧಿಕಾರಿಗಳಿಗೂ ಲ್ಯಾಪ್‌ಟಾಪ್‌ ದಯಪಾಲಿಸಲು ನಿರ್ಧರಿಸಲಾಗಿದೆ' ಎಂದು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಜಿ. ಮಂಜುನಾಥ್ ರಾಜು ತಿಳಿಸಿದ್ದಾರೆ.

ಮುಂದಿನ ಬಜೆಟ್ ವೇಳೆಗೆ ಲ್ಯಾಪ್‌ಟಾಪ್‌ ಮೂಲಕವೇ ಇಡೀ ಬಜೆಟ್ ಅನ್ನು ಕಳಿಸುವ ಸಾಧ್ಯತೆ ಇದೆ. ಇದರಿಂದ ಅನಗತ್ಯ ಪೇಪರ್ ವರ್ಕ್, ಪ್ರಿಂಟಿಂಗ್ ವೆಚ್ಚ ಎಲ್ಲ ಉಳಿತಾಯ ಮಾಡಬಹುದು ಎಂದು ಅವರು ಹೇಳಿದರು.

'ಇದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ. BBMP ನಿರ್ಧಾರ ಶ್ಲಾಘನೀಯ. ಈ ಐಟಿ ಟ್ಯಾಗ್ ಧರಿಸಲು ಬೆಂಗಳೂರು ಅರ್ಹವಾಗಿದೆ' ಎಂದು ಸಿವಿ ರಾಮನ್ ನಗರದ ಕಾರ್ಪೊರೇಟರ್ ಎಂ ಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ. ಬಹಳಷ್ಟು ಕಾರ್ಪೊರೇಟರುಗಳು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
The BBMP will be buying the latest laptops, costing between Rs 30,000 and Rs 50,000, for our corporators to reduce paperwork and usher in e-transactions. Kodigehalli ward corporator, Ashwath Narayan Gowda, said - Laptops can be given and it is not a bad idea. At least, we can reduce paperwork. Adopting technologies that are commonly used nowadays is not bad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X