ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಪ್ರಮೋದ್ ಮಹಾಜನಗೂ ಕಾಡಲಿದೆ ಸ್ಪೆಕ್ಟ್ರಂ ಭೂತ

By Srinath
|
Google Oneindia Kannada News

2g-scam-pramod-mahajan-role-under-cbi-scanner
ಹೊಸದಿಲ್ಲಿ, ನ. 10: ಸ್ಪೆಕ್ಟ್ರಂ ಅಕ್ರಮ ಭೂತ ದಿ. ಪ್ರಮೋದ್ ಮಹಾಜನ್ ಗೂ ಕಾಡಲಿದೆ. ಮಹಾಜನರಿಂದ ಬೊಕ್ಕಸಕ್ಕೆ 565 ಕೋಟಿ ರುಪಾಯಿ ನಷ್ಟವುಂಟಾಗಿದೆ ಎದು ದೂರಲಾಗಿದೆ. ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ಟೆಲಿಕಾಂ ಸಚಿವರಾಗಿದ್ದ ಮಹಾಜನ್ ಆಡಳಿತದ ವೇಳೆ ಸ್ಪೆಕ್ಟ್ರಂ ಹರಾಜುಗಳಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಕುರಿತು ಸಿಬಿಐ ನೂತನ ಪ್ರಕರಣ ದಾಖಲಿಸಲಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ 2001-2007ರ ಅವಧಿಯಲ್ಲಿ ನಡೆದಿರುವ ಸ್ಪೆಕ್ಟ್ರಂ ಹರಾಜುಗಳ ಕುರಿತು ಪ್ರಾಥಮಿಕ ತನಿಖೆಯೊಂದಕ್ಕೆ ಚಾಲನೆ ನೀಡಲಾಗಿದೆ ಎಂದು ಸಿಬಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2001-2003ರ ನಡುವೆ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಟೆಲಿಕಾಂ ಸಚಿವರಾಗಿದ್ದರು.

ಈ ಅವಧಿಯಲ್ಲಿ ಸಚಿವರ ಸಮೂಹದ ನೇತೃತ್ವವನ್ನು ಹೊಂದಿದ್ದ ಮಾಜಿ ಹಣಕಾಸು ಸಚಿವ ಜಸ್ವಂತ್ ಸಿಂಗ್‌ರ ಪಾತ್ರದ ಕುರಿತು ತನಿಖೆ ನಡೆಯಲಿದೆ ಸಿಬಿಐ ಈಗಾಗಲೇ ಹೇಳಿದೆ.

ಸ್ಪೆಕ್ಟ್ರಂ ಹರಾಜು ವಿಷಯದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಇದೀಗ ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ಗಳನ್ನು ನಷ್ಟ ಮಾಡಿರುವ ಈ ಹರಾಜಿನಲ್ಲಿ ಅವ್ಯವಹಾರ ಎಸಗಿದ ಆರೋಪದಲ್ಲಿ ಹಲವಾರು ಮಂದಿ ಜೈಲು ಸೇರಿದ್ದಾರೆ.

ಈಗ, ಬಿಜೆಪಿ ಆಡಳಿತಾವಧಿಯಲ್ಲೂ ಸ್ಪೆಕ್ಟ್ರಂ ಹರಾಜಿನಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಯಲಿದೆ.

English summary
2G Scam - Pramod Mahajan role under CBI scanner: Mahajan's decision allegedly caused a whopping Rs 565 crores revenue loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X