ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುದದಲ್ಲಿ ಚಿನ್ನದ ಬಿಸ್ಕತ್ತು ಇಟ್ಕೊಂಡಿದ್ದ ಐನಾತಿ ಕಳ್ಳ

By Mahesh
|
Google Oneindia Kannada News

Gold smuggler held
ಚೆನ್ನೈ, ನ.9: ಚಿನ್ನದ ಸ್ಮಗ್ಲಿಂಗ್ ಮಾಡುವವರು ದಿನಕ್ಕೊಂದು ವೇಷ, ತಂತ್ರ ಬಳಸುವುದು ಸಾಮಾನ್ಯ. ಶ್ರೀಲಂಕಾದಿಂದ ಬಂದ ಪ್ರಯಾಣಿಕನೊಬ್ಬನ ಬಗ್ಗೆ ಅನುಮಾನ ಬಂದು ವಿಮಾನ ನಿಲ್ದಾಣದ ಸಿಬ್ಬಂದಿ ತಡೆದು ತಪಾಸಣೆ ನಡೆಸಿದಾಗ ಕಂಡ ದೃಶ್ಯಕ್ಕೆ ಎಲ್ಲರೂ ಬೆಚ್ಚಿದ್ದಾರೆ.

ಈ ಐನಾತಿ ಕಳ್ಳ ಗುದದ್ವಾರದಲ್ಲಿ ಬರೋಬ್ಬರಿ 9 ಚಿನ್ನದ ಬಿಸ್ಕತ್ ಇಟ್ಟುಕೊಂಡಿದ್ದ.ಆರೋಪಿಯನ್ನು ತಿರುಚ್ಚಿ ನಿವಾಸಿ ಬದ್ರುದ್ದೀನ್ ಯೂಸುಫ್ ಗುರುತಿಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಈತ ಕೊಲಂಬೋದಿಂದ ವಿಮಾನದಲ್ಲಿ ಬಂದಿಳಿದು ಚೆನ್ನೈಯತ್ತ ಪ್ರಯಾಣ ಬೆಳೆಸುತ್ತಿದ್ದ. ಆತನ ನಡಿಗೆ ಕಂಡು ಸಂಶಯ ಮೂಡಿತು. ತಪಾಸಣೆ ವೇಳೆ ಗುದದ್ವಾರದಲ್ಲಿ ಚಿನ್ನದ ಬಿಸ್ಕತ್ ಬಚ್ಚಿಟ್ಟಿರುವುದು ಪತ್ತೆಯಾಗಿದೆ.

ಅಂದಾಜು 25 ಲಕ್ಷ ರೂ. ಮೌಲ್ಯದ ಒಂಬತ್ತು ಚಿನ್ನದ ಬಿಸ್ಕತ್ ವಶಪಡಿಸಿಕೊಳ್ಳಲಾಗಿದೆ. ಸ್ಮಗ್ಲಿಂಗ್ ಜಾಲದ ಬಗ್ಗೆ ಯಾವುದೇ ಸುಳಿವು ಕೊಟ್ಟಿಲ್ಲ. ವಿಚಾರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
A passenger from Sri Lanka, Badruddin Yusuf, a resident of Tiruchirapalli, has allegedly carried nine gold biscuits in his rectum. Accused has been arrested at the Chennai international airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X