ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ನ. 12 ಅಪ್ಪನ ದಿನ ಮಾವನ ದಿನ!

By Prasad
|
Google Oneindia Kannada News

HG Somasekhara Rao and K Ramanna
'ಮಿಥಿಲೆಯ ಸೀತೆಯರು' ಖ್ಯಾತಿ ನಟ, ರಂಗಕರ್ಮಿ ಎಚ್.ಜಿ. ಸೋಮಶೇಖರ ರಾವ್ ಅವರ ಜೀವನಕಥೆ ಆಧರಿಸಿದ ಆಡಿಯೋ 'ಸೋಮಣ್ಣನ ಸ್ಟಾಕ್' ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಕೆ. ರಾಮಣ್ಣ ಅವರ ಸ್ವಾತಂತ್ರ್ಯ ಚಳವಳಿಯ ಅನುಭವಗಳ ವಿಡಿಯೋ 'ಮೈಸೂರಿಗೆ ಬಾರದ ಸ್ವಾತಂತ್ರ್ಯ' ನ. 12, ಶನಿವಾರ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗುತ್ತಿವೆ.

ತಂದೆಯ ಋಣ ತೀರಸಲಾರದ್ದು. ಆದರೂ ಮಕ್ಕಳ ಕೃತಜ್ಞತೆಯನ್ನು ಈ ಎರಡು ಆಡಿಯೋ ಮತ್ತು ವಿಡಿಯೋ ರೂಪದಲ್ಲಿ ತೀರಿಸುತ್ತಿರುವವರು ವಕೀಲೆ, ಲೇಖಕಿ ಅಂಜಲಿ ರಾಮಣ್ಣ. ಸೋಮಶೇಖರ ರಾವ್ ಅವರು ಅಂಜಲಿಯವರ ಮಾವ ಮತ್ತು ರಾಮಣ್ಣ ಅವರು ಅಂಜಲಿ ಅವರ ತಂದೆ. ಇವರಿಬ್ಬರ ಬಗ್ಗೆ ಆಸ್ಥೆಯಿಂದ, ಪ್ರೀತಿಯಿಂದ, ಧನ್ಯತೆಯಿಂದ ವೀಡಿಯೋ ಮತ್ತು ಆಡಿಯೋ CDಗಳನ್ನು ತಂದಿರುವುದಾಗಿ ಅಂಜಲಿ ಹೇಳಿದ್ದಾರೆ.

ಕಾರ್ಯಕ್ರಮದ ವಿವರ
ದಿನಾಂಕ :
ನವೆಂಬರ್ 12, 2011, ಶನಿವಾರ
ಸಮಯ : ಬೆಳಿಗ್ಗೆ 10.15
ಸ್ಥಳ : ಮಾನಂದಿ ಸಂಸ್ಕೃತಿ ಸದನ
ನಂ.317, 9ನೇ ಮುಖ್ಯ ರಸ್ತೆ, 5ನೇ ಬ್ಲಾಕ್ ಜಯನಗರ, ಬೆಂಗಳೂರು-560 041
(ಫ್ಲೋಟಿಂಗ್ ವಾಲ್ಸ್ ಎದುರು, ಆದಿಕೇಶ್ವರ ಮಾರ್ಕೆಟಿಂಗ್ ಪಕ್ಕ)

ವೇದಿಕೆಯ ಮೇಲೆ : ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಮತ್ತು ಖ್ಯಾತ ರಂಗಕರ್ಮಿ, ನಿರ್ದೇಶಕಿ ಡಾ.ಗೀತಾ ರಾಮಾನುಜಂ ಅವರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

'ಕಾಡು ಕುದುರೆ ಓಡಿ ಬಂದಿತ್ತ' ಹಾಡಿಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಗಾಯಕ ಶಿವಮೊಗ್ಗ ಸುಬ್ಬಣ್ಣ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮ ಶುರುವಾಗುವುದು ಬೆಳಿಗ್ಗೆ 10.45 ಕ್ಕಾದರೂ ಅರ್ಧ ಗಂಟೆ ಮುಂಚೆ ಆಗಮಿಸಬೇಕಾಗಿ ಅಂಜಲಿ ರಾಮಣ್ಣ ಮತ್ತು ಅವರ ಪತಿ ನ್ಯಾಯಾಧೀಶ ಎಚ್.ಎಸ್. ವಿವೇಕಾನಂದ ಅವರು ಸ್ನೇಹಿತರನ್ನು ಕೋರಿದ್ದಾರೆ.

English summary
Advocate, Kannada writer Anjali Ramannas tribute to her father, freedom fighter and journalist Mysore Ramanna and father-in-law actor, writer, retd Dy General Manager Canara Bank, H G Somashekhara Rao. Audio and video release event in Manandi Hall, Jayanagar Bangalore, Nov 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X