• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಂಗಾವತಿ ಸಮ್ಮೇಳನಕ್ಕೆ ಸಿಪಿ ಕೃಷ್ಣಕುಮಾರ್ ಅಧ್ಯಕ್ಷ

By Mahesh
|

ಕೊಪ್ಪಳ, ನ.9 : ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಡಿ. 9 ರಿಂದ 11 ರವರೆಗೂ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಪ್ರಕಟಿಸಿದ್ದಾರೆ.

ಸಿಪಿಕೆ ಎಂದೇ ಜನಜನಿತರಾಗಿರುವ ನೃಪತುಂಗ ಪ್ರಶಸ್ತಿ ವಿಜೇತ, ಮೈಸೂರು ಮೂಲದ ಸಾಹಿತಿ, ವಿಮರ್ಶಕ ಸಿ.ಪಿ. ಕೃಷ್ಣಕುಮಾರ್ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಾಹಿತಿ ಎಂಎಂ ಕಲ್ಬುರ್ಗಿ ಹಾಗೂ ಉಷಾ ಪಿ ರೈ ಅವರ ಹೆಸರು ಮುಂಚೂಣಿಯಲ್ಲಿತ್ತು. ಇವರ ಜೊತೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಡ್, ಚಂದ್ರಶೇಖರ ಕಂಬಾರ, ಡಾ. ಚಿದಾನಂದ ಮೂರ್ತಿ, ಹಂಪಾ ನಾಗರಾಜಯ್ಯ ಹಾಗೂ ಕೋ. ಚನ್ನಬಸಪ್ಪ ಸೇರಿದಂತೆ ಸುಮಾರು 15 ಜನ ಸಾಹಿತಿಗಳ ಹೆಸರನ್ನು ಪರಿಗಣಿಸಲಾಗಿತ್ತು ಎಂದು ನಲ್ಲೂರು ಪ್ರಸಾದ್ ಅವರು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದ ಭಾಗಕ್ಕೆ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಗೆ ಈ ಬಾರಿ ಸಮ್ಮೇಳನ ನೀಡುವ ಅವಕಾಶ ದೊರೆತಿದೆ. 1992 ರಲ್ಲಿ ಸಿಂಪಿ ಲಿಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ನಂತರ ಕೊಪ್ಪಳ ಜಿಲ್ಲಾಕೇಂದ್ರವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳಸುವ ಪ್ರಮುಖ ವೇದಿಕೆಯಾಗಿ ಬೆಳೆದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysore based Kannada Writer C.P. Krishnakumar will preside over 8th Akhila Bharata Kannada Sahitya Sammelan to be held at Gangavati from December 9 to 11 said Kannada Sahitya Parishat president Dr. Nallur Prasad. M.M. Kalburgi and Usha P. Rai were in the race for the prestigious sammelena president post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more