ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕಿನ ಕಪ್ಪು ಹಣ ಸದ್ಯದಲ್ಲೇ ಭಾರತಕ್ಕೆ ವಾಪಸ್

By Srinath
|
Google Oneindia Kannada News

swiss-banks-ready-to-disclose-indian-accounts
ನವದೆಹಲಿ, ನ. 8: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತ ಸರಕಾರ ಕೋರಿಕೆ ಸಲ್ಲಿಸಿದರೆ ಸ್ವಿಸ್ ಬ್ಯಾಂಕುಗಳಲ್ಲಿರುವ ಭಾರತೀಯರ ಖಾತೆಗಳ ವಿವರ ನೀಡಲು ತಾನು ಸಿದ್ಧ ಎಂದು ಸ್ವಿಟ್ಜರ್ಲೆಂಡ್ ಸರಕಾರ ಪ್ರಕಟಿಸಿದೆ. ಇದರಿಂದ ಸ್ವಿಸ್ ಬ್ಯಾಂಕುಗಳಲ್ಲಿ ಸಂಗ್ರಹವಾಗಿರುವ ಭಾರತೀಯರ ಕಪ್ಪು ಹಣ ಭಾರತಕ್ಕೆ ಮರಳುವ ಆಸೆ ಜೀವಂತವಾಗಿದೆ.

ಎರಡೂ ರಾಷ್ಟ್ರಗಳ ಮಧ್ಯೆ ದ್ವಿತೆರಿಗೆ ತಿದ್ದುಪಡಿ ಒಪ್ಪಂದದ ಪ್ರಕಾರ ಭಾರತೀಯರು ಹೊಂದಿರುವ ಖಾತೆಗಳ ಕುರಿತು ಮಾಹಿತಿ ನೀಡಲು ತನ್ನ ಅಭ್ಯಂತರ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಭಾರತ ಸರ್ಕಾರದ ಎಲ್ಲ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಪರಿಗಣಿಸುವುದಾಗಿ ಹೇಳಿರುವ ಸ್ವಿಟ್ಜರ್ಲೆಂಡ್, ಈ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ.

ದ್ವಿತೆರಿಗೆ ತಿದ್ದುಪಡಿ ಒಪ್ಪಂದದ ಅನ್ವಯ ಎರಡೂ ರಾಷ್ಟ್ರಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ ಎಂದು ಭಾರತದಲ್ಲಿರುವ ಸ್ವಿಸ್ ರಾಯಭಾರಿ ಫಿಲಿಪ್ ವೆಲ್ತಿ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಂದು ವೇಳೆ ಭಾರತ ಸರ್ಕಾರ ಖಾತೆಗಳ ಬಗ್ಗೆ ಮಾಹಿತಿ ಕೋರಿ ಮನವಿ ಸಲ್ಲಿಸಿದರೆ ಅದನ್ನು ಪರಿಗಣಿಸುವುದಾಗಿ ಅವರು ಸ್ಪಷ್ಟಪಡಿಸಿದರು.

English summary
Switzerland has agreed to disclose details of secret bank accounts held by Indian residents, as long as it falls within the structure of the revised double taxation treaty between Switzerland and the India, says Swiss Ambassador Philippe Welti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X