ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿಶಂಕರ ಗುರೂಜಿ ಭ್ರಷ್ಟಾಚಾರ ವಿರೋಧಿ ಯಾತ್ರೆ: ಕಾಂಗ್ರೆಸ್ಸಿಗೆ ನಡುಕ

By Srinath
|
Google Oneindia Kannada News

ravi-shankar-guruji-up-yatra-set-back-to-congress
ಹೊಸದಿಲ್ಲಿ, ನ. 8: ಕಾಂಗ್ರೆಸ್ ಅಧಿಪತ್ಯದ ಯುಪಿಎ ಸರಕಾರದ ಪರಿಸ್ಥಿತಿ ದಿನೇ ದಿನೆ ಶೋಚನೀಯವಾಗುತ್ತಿದೆ. ರವಿಶಂಕರ ಗುರೂಜಿ ಅವರು ಕಾಂಗ್ರೆಸ್ಸ್ಇನ ಭದ್ರಕೋಟೆ ಎನಿಸಿರುವ ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಭ್ರಷ್ಟಾಚಾರ ವಿರೋಧಿ ಯಾತ್ರೆಯಲ್ಲಿ ತೊಡಗಿದ್ದು ಪಕ್ಷಕ್ಕೆ ತೀವ್ರ ಇರುಸುಮುರುಸು ತಂದಿದೆ.

ರವಿಶಂಕರ ಗುರೂಜಿ ನವೆಂಬರ್ 7ರಿಂದ 10ರವರೆಗೆ ಈ ಯಾತ್ರೆ ನಡೆಸಲಿದ್ದು ಜೌನಾಪುರ, ಸುಲ್ತಾನ್ ಪುರ, ಮಿರ್ಜಾಪುರ, ಅಮೇಠಿ, ಸೊನೆಭದ್ರಾ, ಚಂಡೌಲಿ ಮತ್ತು ಕಾನ್ಪುರಕ್ಕೆ ಭೇಟಿ ನೀಡಲಿದ್ದಾರೆ. ಗಮನಾರ್ಹವೆಂದರೆ ಇವೆಲ್ಲ ಕಾಂಗ್ರೆಸ್ ಪಾಳೆಗಾರಿಕೆ ಪ್ರದೇಶಗಳು. ಸದ್ಯದಲ್ಲೇ ಉತ್ತರ ಪ್ರದೇಶದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿದ್ದು ರವಿಶಂಕರ ಗುರೂಜಿ ಯಾತ್ರೆ ಕಾಂಗ್ರೆಸ್ ಗೆ ಕಂಟಕ ಪ್ರಾಯವಾಗಲಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ ರವಿಶಂಕರ ಗುರೂಜಿ ಯಾತ್ರೆಯ ಪರಿಣಾಮವನ್ನು ನಿಷ್ಫಲಗೊಳಿಸಲು ಕಾಂಗ್ರೆಸ್ ಯುವರಾಜ ನ.14 ರಿಂದಲೇ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದನ್ನೆಲ್ಲ ಮುಂದಾಲೋಚಿಸಿಯೇ ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಇತ್ತೀಚೆಗೆ ಆರ್ಎಸ್ಎಸ್ ಜತೆ ರವಿಶಂಕರ ಗುರೂಜಿ ಸಂಬಂಧ ಕಲ್ಪಿಸಿದ್ದು!

ಬಾಬಾ ರಾಮದೇವ್ ಅವರು ಆರ್ಎಸ್ಎಸ್ ನ ಪ್ಲಾನ್ ಎ, ಅಣ್ಣಾ ಹಜಾರೆ ಆರ್ಎಸ್ಎಸ್ ಪ್ಲಾನ್ ಬಿ ಮತ್ತು ಇದೀಗ ರವಿಶಂಕರ ಗುರೂಜಿ ಪ್ಲಾನ್ ಸಿ ಎಂದು ದಿಗ್ವಿಜಯ್ ಸಿಂಗ್ ಬಣ್ಣಿಸಿದ್ದರು.

English summary
With spiritual guru and Art of Living founder Sri Sri Ravi Shankar is on an anti-corruption yatra across Uttar Pradesh the Congress woes only set to increase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X